ಸಹಕಾರಿ ಬ್ಯಾಂಕ್ ಒಂದರ ಬಿ.ಸಿ.ರೋಡ್ ಶಾಖೆಗೆ ಗುರುವಾರ ಬಂಟ್ವಾಳ ಚುನಾವಣಾಧಿಕಾರಿಗಳ ತಂಡ, ದಾಸ್ತಾನಿರಿಸಲಾಗಿದ್ದ ಸೀರೆಗಳನ್ನು ವಶಪಡಿಸಿಕೊಂಡಿದೆ. ನೀತಿಸಂಹಿತೆ ಕಾರಣ ಸದಸ್ಯರಿಗೆ ಹಂಚಲು ಸಾಧ್ಯವಾಗದೆ ದಾಸ್ತಾನಿರಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ದೂರೊಂದರ ಆಧಾರದಲ್ಲಿ ಆಗಮಿಸಿದ ಫ್ಲೈಯಿಂಗ್ ಸ್ಕ್ವಾಡ್, ಏಳು ಗೋಣಿಚೀಲಗಳಲ್ಲಿ ತುಂಬಿಸಿಡಲಾಗಿದ್ದ 1222 ಸೀರೆಗಳನ್ನು ವಶಪಡಿಸಿಕೊಂಡಿದೆ. ಇದರ ಮೌಲ್ಯ 2.44 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಚುನಾವಣಾಧಿಕಾರಿ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಂಡ ತಿಳಿಸಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…