ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಶಾಖೆಯನ್ನು ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಹಿರಿಯರಾದ ಜಿ.ಆನಂದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಕ್ಷೇತ್ರ ಅಧ್ಯಕ್ಷರಾದ ಬಿ. ದೇವದಾಸ ಶೆಟ್ಟಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕ್ಷೇತ್ರ ಉಪಾಧ್ಯಕ್ಷ ದೇವಪ್ಪ ಪೂಜಾರಿ, ರೋನಾಲ್ಡ್ ಡಿ ಸೋಜಾ, ಪುಷ್ಪರಾಜ್ ಶೆಟ್ಟಿ, ರಂಜಿತ್ ಮೈರ, ಗುರುದತ್ ನಾಯಕ್, ಜಗದೀಶ್ ಭಂಡಾರಿ, ಚರಣ್ ಜುಮಾದಿಗುಡ್ಡೆ, ಮನೋಜ್ ಕಳ್ಳಿಗೆ ಮತ್ತು ಪಕ್ಷದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.