ಜಮ್ಮುವಿನ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಫರಂಗಿಪೇಟೆ ವಿವಿಧ ಸಮಾನ ಮನಸ್ಕ ಸಂಘಟನೆಗಳು ಮತ್ತು ನಾಗರಿಕರು ಸೇರಿ ಫರಂಗಿಪೇಟೆ ಜಂಕ್ಷನ್ ಬಳಿ ಮಂಗಳವಾರ ರಾತ್ರಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.
ಕ್ರೂರ ಕೃತ್ಯ ಎಸಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಮೊಂಬತ್ತಿಗಳನ್ನು ಹಿಡಿದು ಸಂತ್ರಸ್ತೆ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನಕಾರರು ವಿವಿಧ ಸ್ಲೋಗನ್‌ಗಳ ಪ್ಲೇ-ಕಾರ್ಡ್‌ಗಳನ್ನು ಪ್ರದರ್ಶಿಸಿ ನ್ಯಾಯಕ್ಕಾಗಿ ಒತ್ತಾಯಿಸಿದರು.
ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ಮಾತನಾಡಿ, ಕಥುವಾದಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡನೀಯ. ದೇಶದಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಇವು ದೇಶ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಈ ಬಗ್ಗೆ ಕಠಿಣ ಕಾನೂನನ್ನು ಜಾರಿಗೊಳಿಸುವ ಮೂಲಕ ಅತ್ಯಾಚಾರಿಗಳಿಗೆ ಶೀಘ್ರ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ಅಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ, ಆಸೀಫ್ ಮೇಲ್ಮನೆ, ಎಫ್.ಎ ಖಾದರ್, ಅಲ್ತಫ್ ದುಬೈ, ಇಮ್ತಿಯಾಝ್, ವೃಂದಾ ಪೂಜಾರಿ, ಲಕ್ಷ್ಮೀ, ಗ್ರಾಪಂ ಸದಸ್ಯ ಹಾಶಿರ್ ಪೆರಿಮಾನ್, ಇಕ್ಬಾಲ್ ಸುಜೀರ್, ಬಾಸ್ಕರ್ ರೈ, ಲೀಣಾ, ಇಕ್ಬಾಲ್ ದರ್ಬಾರ್, ಪಿಎಫ್‌ಐ ಕಾರ್ಯದರ್ಶಿ ಸೆಲೀಮ್ ಕೆ, ರಫಿಕ್ ಪೆರಿಮಾರ್, ಮುಸ್ತಫಾ ಮೇಲ್ಮನೆ, ಜಾಹೀರ್, ಎಂ.ಕೆ ಮುಹಮ್ಮದ್, ಇಸ್ಮಾಯಿಲ್ ಪಾವೂರ್ ಮತ್ತಿತರರು ಹಾಜರಿದ್ದರು.