ಶ್ರೀ ಮಹಾಮಾಯಿ ಸಿನಿ ಕ್ರಿಯೇಶನ್ಸ ರವರ ಎರಡನೇ ಕಲಾಕಾಣಿಕೆ, ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದ ಹಾಗೂ ನಿರ್ಮಾಣದ ಜೆವಣ್ ಎಂಬ ಜಿ.ಯಸ್. ಬಿ ಕೊಂಕಣಿ ಭಾಷೆಯ ಕಾಮಿಡಿ ಚಲನಚಿತ್ರದ ಮುಹೂರ್ತ ಕಾರ್ಯಕ್ರಮವು ಶ್ರೀ.ತಿರುಮಲ ವೆಂಕಟರಮಣ ದೇವಸ್ಥಾನ ಬಂಟ್ವಾಳದಲ್ಲಿ ಬುಧವಾರ ನಡೆಯಿತು.
ವೇದಮೂರ್ತಿ ವಸಂತ್ ಭಟ್ ಕ್ಲಾಪ್ ಮಾಡಿದರು. ದೇವಳದ ಮೊಕ್ತೇಸರರಾದ ಅರ್ಲ ಗೋವಿಂದ ಪ್ರಭು ಕ್ಯಾಮರಾ ಚಾಲನೆ ಮಾಡಿದರು. ವೇದಮೂರ್ತಿ ಸದಾಶಿವ ಭಟ್ ಮತ್ತು ವೇದಮೂರ್ತಿ ಸದಾನಂದ ಭಟ್ ಶುಭಾಶೀರ್ವಾದಗೈದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ವಿಟ್ಲ ಮಂಗೇಶ್ ಭಟ್, ಡಾ. ಅಶೋಕ ಕಾಮತ್, ಎಂ.ಸುಬ್ರಮಣ್ಯ.ಪೈ, ಮಧುಕರ ಮಲ್ಯ, ಪ್ರಮೋದ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಜೆವಣ್ ಅಪ್ಪಟ ಸಾಂಸಾರಿಕ ಕಥೆಯೊಳಗೆ ಮಿಳಿತವಾಗಿರುವ ಭರಪೂರ ಹಾಸ್ಯದ ಅಪರೂಪದ ಚಿತ್ರ. ಈ ಹಿಂದೆ ಅಂತು ಹೆಸರಿನ ವಿಭಿನ್ನ ಕೊಂಕಣಿ ಚಿತ್ರ ಮಾಡಿದ್ದ ಕರೋಪಾಡಿ ಅಕ್ಷಯ್ ನಾಯಕ್ ರವರು ತನ್ನ ಎರಡನೇ ಚಿತ್ರಕ್ಕೆ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಅಂತುವಿಗೆ ಕೆಲಸ ಮಾಡಿದ್ದ ತಾಂತ್ರಿಕ ವರ್ಗವೆ ಈ ಚಿತ್ರಕ್ಕೂ ಇರಲಿದೆ. ಕಾಲೇಜ್ ಮುಗಿದರೂ ಕೆಲಸ ಸಿಗದೆ ಮನೆಯವರಿಗೆ ಭಾರವಾಗಿರುವ ಯುವ ಪೀಳಿಗೆಯ ಕಥೆಯನ್ನು ಆಯ್ಕೆ ಮಾಡಲಾಗಿದೆ.