ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಬಂಟ್ವಾಳ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಯಿಂದ ಸ್ಪರ್ದಿಸುತ್ತಿರುವ ರಿಯಾಝ್ ಫರಂಗಿಪೇಟೆ ಏಪ್ರಿಲ್ 20 ರ ಶುಕ್ರವಾರದಂದು ನಾಮ ಪತ್ರ ಸಲ್ಲಿಸಲಿದ್ದಾರೆ.
ಮದ್ಯಾಹ್ನ 2 ಘಂಟೆಗೆ ಕ್ಷೇತ್ರ ಕಛೇರಿಯಿಂದ ಕೈಕಂಬ ರಸ್ತೆಯಾಗಿ ತಾಲೂಕು ಕಛೇರಿಗೆ ಪಾದಯಾತ್ರೆ ಮೂಲಕ ನಾಮ ಪತ್ರ ಸಲ್ಲಿಸಲಿದ್ದು ನಂತರ ಲಯನ್ಸ್ ಕ್ಲಬ್ ವಠಾರದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಲ್ಯಾಸ್ ಭಾಗವಹಿಸಲಿದ್ದು ಅಲ್ಲದೇ ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ,ಕಾರ್ಯದರ್ಶಿಗಳಾದ ಆಲ್ಫಾನ್ಸೋ ಫ್ರಾಂಕೋ,ಅಕ್ರಮ್ ಹಸನ್ ಚುನಾವಣಾ ವೀಕ್ಷಕರಾಗಿರುವ ಅಬ್ದುಲ್ ಖಾದರ್ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ, ಉಪಾಧ್ಯಕ್ಷರುಗಳಾದ ಆಂಟೊನಿ ಪ್ರದೀಪ್,ಆನಂದ ಮಿತ್ತಬೈಲ್, ಪಿ ಎಫ್ ಐ ಮುಖಂಡರಾದ ಶಾಫಿ ಬೆಳ್ಳಾರೆ,ಅನ್ವರ್ ಸಾದಾತ್,ಇಜಾಝ್ ಅಹ್ಮದ್ ಹಾಗೂ ಪಕ್ಷದ ಮುಖಂಡರುಗಳಾದ ನ್ಯಾ ಅಬ್ದುಲ್ ಮಜೀದ್ ಖಾನ್,ಹನೀಫ್ ಖಾನ್,ಇಕ್ಬಾಲ್ ಬೆಳ್ಳಾರೆ, ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕ್ಷೇತ್ರ ಅಧ್ಯಕ್ಷರು ಮತ್ತು ಚುನಾವಣ ಸಹ ವೀಕ್ಷಕರಾಗಿರುವ ಸಾಹುಲ್ ಹಮೀದ್ ಎಸ್ ಎಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.