ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆ ಮತ್ತು ಸುರಕ್ಷತೆಗಾಗಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಮತ್ತು ವಿಟ್ಲಗಳಲ್ಲಿ ಸಿಪಿಎಂಎಫ್ – ಸುರಕ್ಷಾ ಸೀಮಾ ಬಲ ತುಕಡಿ ಹಾಗೂ ಬಂಟ್ವಾಳ ಪೊಲೀಸರು ಪಥಸಂಚಲನ ನಡೆಸಿದರು.
ಜನರಲ್ಲಿ ಚುನಾವಣೆ ಕುರಿತು ಧೈರ್ಯ ಮೂಡಿಸುವುದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷವಾಗಿ ಬ್ಯಾಂಡ್, ವಾದ್ಯ ಮೇಳವು ಜೊತೆಯಲ್ಲಿ ಸಾಗಿತ್ತು. ಕೆ.ಸಿ.ರೋಡಿನಿಂದ ಹೊರಟು ಕಲ್ಲಡ್ಕ ಪೇಟೆಯಾಗಿ ಗೋಳ್ತಮಜಲು ವರೆಗೆ ಸಾಗಿ ವಾಪಾಸು ಕಲ್ಲಡ್ಕ ಕ್ಕೆ ಪಥಸಂಚಲನ ನಡೆಸಲಾಯಿತು.
ಈ ಸಂದರ್ಭ ಸುರಕ್ಷಾ ಸೀಮಾ ಬಲದ ಕಮಾಂಡ್ ದೀರಜ್ , ಎಡಿಶನಲ್ ಎಸ್ಪಿ ಸಜಿತ್, ಪ್ರೋಬೆಶನರಿ ಐಪಿಎಸ್ ಅಧಿಕಾರಿ ಅಕ್ಷಯ್ ಎಮ್ ಹಾಕೆ, ಡಿ.ವೈ.ಎಸ್.ಪಿ.ಶ್ರೀ ನಿವಾಸ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಕುಮಾರ್, ನಗರ ಠಾಣಾ ಎಸ್.ಐ.ಚಂದ್ರಶೇಖರ್, ಅಪರಾಧ ವಿಭಾಗದ ಎಸ್.ಐ.ಹರೀಶ್, ಟ್ರಾಫಿಕ್ ಪೋಲೀಸ್ ಎಸ್. ಐ.ಯಲ್ಲಪ್ಪ ಮತ್ತು ಬಂಟ್ವಾಳ ವೃತ್ತಕ್ಕೆ ಒಳಪಟ್ಟ ಪೊಲೀಸ್ ಸಿಬ್ಬಂದಿ ಸೇರಿ ಸುಮಾರು 180 ಮಂದಿ ಪಥಸಂಚಲನ ನಡೆಸಿದರು.