ಜಮ್ಮು ಕಾಶ್ಮೀರದ ಕಟ್ವಾ ಜಿಲ್ಲೆಯಲ್ಲಿ ಎಂಟರ ಹರೆಯದ ಆಸೀಫಾಳ ಅತ್ಯಾಚಾರ ಮತ್ತು ಬರ್ಬರವಾಗಿ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಹಾಗೂ ಊನಾವೂ ಅತ್ಯಾಚಾರ ಪೀಡಿತೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳದ ಘಟಕದ ವತಿಯಿಂದ ತಾಲೂಕಿನ ವಿವಿಧೆಡೆ ಪ್ಲೇ–ಕಾರ್ಡ್ ಪ್ರದರ್ಶನ ನಡೆಸಿತು.
ಅತ್ಯಾಚಾರಿಗಳ ವಿರುದ್ಧ ಪ್ರತಿಭಟನೆಯ ಭಾಗವಾಗಿ ಶುಕ್ರವಾರ ಜುಮಾ ನಮಾಝ್ ಬಳಿಕ ಮಿತ್ತಬೈಲ್ ಮಸೀದಿ, ಅಕ್ಕರಂಗಡಿ ಮಸೀದಿ, ಕಲ್ಲಡ್ಕ ಮಸೀದಿ ಹಾಗೂ ವಿಟ್ಲ ಮಸೀದಿ ಮುಂಭಾಗಳಲ್ಲಿ ಪ್ಲೇ–ಕಾರ್ಡ್ ಪ್ರದರ್ಶನ ಮಾಡಿ, ನ್ಯಾಯಕ್ಕಾಗಿ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಸಿಎಫ್ಐ ಮುಖಂಡರಾದ ಅಶ್ವಾನ್ ಸಿದ್ದೀಕ್, ಸುಹಾನ್ ತುಂಬೆ, ರಾಝಿಕ್, ನಾಸಿರ್ ಮೆಲ್ಕಾರ್, ಜಾಬಿರ್ ಬಂಟ್ವಾಳ, ಸಲ್ಮಾನ್ ಬಂಟ್ವಾಳ, ರಶೀದ್ ಪುಣಚ, ಸಫ್ವಾನ್ ಪುಣಚ, ಸಹದ್ ಕಲ್ಲಡ್ಕ, ತಫ್ಸೀರ್ ಕೆ.ಸಿ.ರೋಡ್ ಮೊದಲಾದವರು ಉಪಸ್ಥಿತರಿದ್ದರು.