ಬಿ.ಸಿ.ರೋಡ್ ಕೈಕುಂಜೆ ನಿವಾಸಿ, ರಾ.ಸ್ವ. ಸಂಘದ ಸಕ್ರಿಯ ಸದಸ್ಯರಾಗಿದ್ದ ಬಂಟ್ವಾಳ ವ್ಯ.ಸೇ.ಸ.ಸಂಘದ ಮಾಜಿ ಅಧ್ಯಕ್ಷ ಎಂ.ಸಂಜೀವ (79) ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಎ.12ರಂದು ಅಪರಾಹ್ನ ನಿಧನ ಹೊಂದಿದರು.
ಅವರು ಬಿ.ಸಿ.ರೋಡ್ ನವಜೀವನ ಯುವಕ ಸಂಘದ ಸ್ಥಾಪಕಾಧ್ಯಕ್ಷರು. ವಿಟ್ಲ ವಿಧಾನ ಸಭಾಕ್ಷೇತ್ರ ಬಿ. ಮೂಡ ಗ್ರಾಮ ಬಿಜೆಪಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪತ್ನಿ, ಛಾಯಾಗ್ರಾಹಕ ಸತೀಶ್ ಕುಮಾರ್ ಸಹಿತ ಇಬ್ಬರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…