ಬಂಟ್ವಾಳ ತಾಲೂಕಿನ ತಹಶೀಲ್ದಾರ್ ಹುದ್ದೆಯಲ್ಲಿ ಮತ್ತೆ ಬದಲಾವಣೆ ಆಗಿದೆ. ಈ ಹಿಂದೆ ಇದ್ದ ಪುರಂದರ ಹೆಗ್ಡೆ ಅವರನ್ನು ಬೈಂದೂರಿಗೆ ವರ್ಗಾವಣೆ ಮಾಡಿದ ನಂತರ ಪ್ರಭಾರ ನೆಲೆಯಲ್ಲಿ ಜೀನ್ ಮೇರಿ ತಾವ್ರೋ ಅವರನ್ನು ನಿಯುಕ್ತಿಗೊಳಿಸಲಾಗಿತ್ತು. ಆದರೆ ಈಗ ವೈ. ರವಿ ಅವರು ನೂತನ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದಾರೆ.
ಕೋಲಾರ ಜಿಲ್ಲೆಯವರಾದ ವೈ.ರವಿ ಅಧಿಕಾರ ಸ್ವೀಕರಿಸಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಿರ್ಭೀತಿಯಿಂದ ನಡೆಸುವುದೇ ಮೊದಲ ಆದ್ಯತೆ, ಮತಗಟ್ಟೆಗೆ ಎಲ್ಲ ಮತದಾರರು, ವಿಶೇಷವಾಗಿ ವಿಕಲಚೇತನರೂ ಆಗಮಿಸುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಈ ಸಂದರ್ಭ ಅವರು ತಿಳಿಸಿದರು.
ನೂತನ ತಹಶೀಲ್ದಾರ್ ಅವರನ್ನು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಉಪತಹಶೀಲ್ದಾರ್ ಗಳಾದ ಎ ಪ್ರಕಾಶ್, ರಾಜೇಶ್ ನಾಯ್ಕ್, ಗ್ರೆಟ್ಟಾ ಮಸ್ಕರೇಂಜಸ್, ಸೀತಾರಾಮ, ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳಿಯ, ರಾಮ ಕಾಟಿಪಳ್ಳ, ನವೀನ್ ಬೆಂಜನಪದವು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು