ಬಂಟ್ವಾಳ

ಎಪ್ರಿಲ್ 13,14, 15- ಕರಿಂಕದಲ್ಲಿ “ಕಲರವ” ಮಕ್ಕಳ ಬೇಸಿಗೆ ಶಿಬಿರ


ಸಂಘಟನೆ, ಸಾಹಿತ್ಯ  ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ಸಂಸಾರ ಜೋಡುಮಾರ್ಗದ ಆಶ್ರಯದಲ್ಲಿ ಮೂರು ದಿನಗಳ ಮಕ್ಕಳ ಬೇಸಿಗೆ ಶಿಬಿರ ಕಲರವ-2018 ಎಪ್ರಿಲ್ 13 ರಿಂದ 15 ವರೆಗೆ  ಮಾಣಿ ಅನಂತಾಡಿ ಸಮೀಪದ ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ದೇವಿ ಕಲ್ಯಾಣಮಂಟಪದಲ್ಲಿ ನಡೆಯಲಿದೆ.

8 ರಿಂದ 16 ವರ್ಷದೊಳಗಿನ ಆಸಕ್ತ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು, ರಂಗಾಯಣ ಧನರಾಜ್  ನಿರ್ದೇಶನದಲ್ಲಿ ನಡೆಯಲಿರುವ  ಶಿಬಿರದಲ್ಲಿ ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದ್ದುಹಾಡು, ಆಟ, ನಾಟಕ, ಗುಬ್ಬಚ್ಚಿ ಗೂಡು,ಫ್ಯಾಮಿಲಿ ಪವರ್, ಆರೋಗ್ಯ ಮಾಹಿತಿಯಕ್ಷ ಹೆಜ್ಜೆಗಳು, ಭರತ ನಾಟ್ಯ, ಮುಖವರ್ಣಿಕೆ, ಮುಖವಾಡ, ಕರಕುಶಲ ಕಲೆ ಮೊದಲಾದ ವಿಷಯಗಳ ಬಗ್ಗೆ  ಸಂಪನ್ಮೂಲ ವ್ಯಕ್ತಿಗಳು ಮಾಹಿತಿ, ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 4.30 ರವರೆಗೆ ನಡೆಯುವ ಶಿಬಿರವು ಸಂಪೂರ್ಣ ಉಚಿತವಾಗಿದ್ದು ಪುತ್ತೂರು, ವಿಟ್ಲ, ಮಾಣಿ, ಅನಂತಾಡಿ ಆಸುಪಾಸಿನ ಊರುಗಳ ಆಸಕ್ತ ಮಕ್ಕಳು ಭಾಗವಹಿಸಬಹುದು. ಭಾಗವಹಿಸುವ ಮಕ್ಕಳು 9481017606 ಸಂಖ್ಯೆಗೆ ಕರೆ ಮಾಡಿ ಹೆಸರು ನೊಂದಾಯಿಸುವಂತೆ ಸಂಸಾರ ಜೋಡುಮಾರ್ಗದ ನಿರ್ದೇಶಕ ಮೌನೇಶ ವಿಶ್ವಕರ್ಮ ತಿಳಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts