www.bantwalnews.com – ಸಂಪಾದಕ: ಹರೀಶ ಮಾಂಬಾಡಿ
Pic and News by Vaman Poojary
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾಷೀಕ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಆರಂಭಗೊಂಡಿತು. ಕೊಂಬು, ಬ್ಯಾಂಡ್ ವಾಧ್ಯಗಳೊಂದಿಗೆ ಚೆಂಡಿನ ಗದ್ದೆಯ ಸುಲ್ತಾನ್‌ಕಟ್ಟೆಯವರೆಗೆ ತೆರಳಿ ಗುತ್ತಿನವರನ್ನು ಸ್ವಾಗತಿಸಿ ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರದ ಪ್ರಕಿಯೆಗಳು ನಡೆಯುವುದರಿಂದ ಈ ಭಾರಿ ಸಾಂಕೇತಿಕವಾಗಿ ಮೂರು ಸಲ ಚೆಂಡನ್ನು ಹಾರಿಸಿ ತೆಗೆಯಲಾಯಿತು. ಈಗೆ ಐದು ದಿನಗಳ ಚೆಂಡು ಉತ್ಸವ ನಡೆಯಲಿದೆ.
ಕಡೇಚೆಂಡು ಏ.11ರಂದು ಬುಧವಾರ ನಡೆಯಲಿದೆ ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ದೇವಳದ ಪ್ರ.ಅರ್ಚಕಮಾಧವ ಭಟ್, ನಾರಾಯಣ ಭಟ್, ವಿಷ್ಣುಮೂರ್ತಿನಟ್ಟೋಜ, ಅಮ್ಮುಂಜೆ ಗುತ್ತು ಡಾ.ಮಂಜಯ್ಯ ಶೆಟ್ಟಿ, ಉಳಿಪಾಡಿಗುತ್ತು ತಾರಾನಾಥ ಆಳ್ವ , ಮೊಗರುಗುತ್ತು ವಸಂತ ಶೆಟ್ಟಿ, ರಮೇಶ್ ರಾವ್, ಪರ್ದಕಂಡ ವಾಸುದೇವ ಭಟ್, ಕೃಷ್ಣಕುಮಾರ್ ಪೂಂಜ, ಕೃಷ್ಣರಾಜ್ ಮಾರ್ಲ,ಶಿವಪ್ರಸಾದ್ ಶೆಟ್ಟಿ, ಜೀವರಾಜ್ ಶೆಟ್ಟಿ, ಕೃಷ್ಣಪ್ಪ ಸಪಲಿಗ, ಮಟ್ಟಿ ಗಂಗಾಧರ ಜೋಗಿ ಇದ್ದರು.