www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಜೋಡುಮಾರ್ಗ ನೇತ್ರಾವತಿ ಜೇಸಿ ವತಿಯಿಂದ ಜೇಸಿ ವಲಯ ಮಟ್ಟದ ಚೇರ್‍ಮನ್‌ಶಿಪ್ ಮತ್ತು ಪಾರ್ಲಿಮೆಂಟರಿ ಪ್ರೊಸೀಜರ್‍ಸ್ – ಸಿಎಪಿಪಿ 2018 ಎಂಬ ನಿರ್ವಹಣೆ ಕುರಿತ ಕಾರ್ಯಾಗಾರ ಬಿ.ಸಿ.ರೋಡಿನ ರೋಟರಿ ಹಾಲ್ ನಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಜೇಸಿ೧೫ರ ವಲಯಾಧ್ಯಕ್ಷ ರಾಕೇಶ್ ಕುಂಜೂರು ಉದ್ಘಾಟಿಸಿ ಮಾತನಾಡಿ, ಇಂದು ನಾಯಕನಾದವನಿಗೆ ಒದಗಿಸಬೇಕಾದ ತರಬೇತಿಯ ಅಂಶಗಳನ್ನು ನೀಡುವ ಸಂಸ್ಥೆ ಎಂದೇ ಪ್ರಸಿದ್ಧಿ ಪಡೆದಿರುವ ಜೇಸಿಯ ಮೂಲತತ್ವವೇ ತರಬೇತಿ. ಈ ಕಾರ್ಯಕ್ರಮಕ್ಕೆ ಬರುವ ಆಸಕ್ತರ ಸಂಖ್ಯೆ ವೃದ್ಧಿಯಾಗುತ್ತಿರುವುದು ಸಂತಸದ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರೋಟರಿ ಜಿಲ್ಲೆ ೩೧೮೧ರ ವಲಯ ನಾಲ್ಕರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ ಮಾತನಾಡಿ, ಇನ್ನೊಬ್ಬರನ್ನು ಆಲಿಸುವುದು ಹಾಗೂ ಹೊಸ ವಿಚಾರಗಳ ಅರಿವನ್ನು ಪಡೆಯುವುದು ನಾಯಕತ್ವದ ಪ್ರಮುಖ ಲಕ್ಷಣ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಜೇಸಿ ವಲಯ ಉಪಾಧ್ಯಕ್ಷ ಪಶುಪತಿ ಶರ್ಮ, ತರಬೇತಿ ವಿಭಾಗದ ವಲಯ ನಿರ್ದೇಶಕ ಧೀರೇಂದ್ರ ಜೈನ್, ಜಿಲ್ಲೆಯ ತರಬೇತಿ ವಿಭಾಗದ ತೀರ್ಥಾನಂದ, ಕಾರ್ಯಕ್ರಮದ ತರಬೇತುದಾರರಾದ ಶ್ರೀಧರ ಪಿ.ಎಸ್, ರಾಜೇಶ್ ಶೆಣೈ ಜೇಸಿರೇಟ್ ಅಧ್ಯಕ್ಷೆ ಗಾಯತ್ರಿ ಲೋಕೇಶ್ ಉಪಸ್ಥಿತರಿದ್ದರು. ಜೋಡುಮಾರ್ಗ ಜೇಸಿ ಪೂರ್ವಾಧ್ಯಕ್ಷ ಅಹ್ಮದ್ ಮುಸ್ತಾಫ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಜೋಡುಮಾರ್ಗ ಜೇಸಿ ಉಪಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಜೇಸಿವಾಣಿ ವಾಚಿಸಿದರು. ಜೋಡುಮಾರ್ಗ ಜೇಸಿ ಅಧ್ಯಕ್ಷೆ ಸವಿತಾ ನಿರ್ಮಲ್ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಕೃಷ್ಣರಾಜ ಭಟ್, ಕಾರ್ಯಕ್ರಮ ನಿರ್ದೇಶಕರಾದ ಧೀರಜ್ ಎಚ್, ಜಯರಾಜ್ ಎಸ್. ಬಂಗೇರ ಜೋಡುಮಾರ್ಗ ಜೇಸಿ ನಿರ್ದೇಶಕ ಹರೀಶ್ ಮಾಂಬಾಡಿ ಅತಿಥಿಗಳನ್ನು ಪರಿಚಯಿಸಿದರು. ಜೋಡುಮಾರ್ಗ ಜೇಸಿ ಕಾರ್ಯದರ್ಶಿ ಹರ್ಷರಾಜ್ ಸಿ. ವಂದಿಸಿದರು. ಬಳಿಕ ತರಬೇತಿ ಕಾರ್ಯಕ್ರಮ ನಡೆಯಿತು. ದ.ಕ ಮತ್ತು ಉಡುಪಿ ಜಿಲ್ಲೆಗಳಿಂದ 90ಕ್ಕೂ ಅಧಿಕ ಜೇಸಿ ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.