ಕಾವೇದಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಮತ್ತೊಂದು ಕರ್ನಾಟಕ ಬಂದ್ ನಡೆಯಲಿದೆ. ಇದಕ್ಕೆ ಕರೆ ಕೊಟ್ಟವರು ಕನ್ನಡ ಚಳವಳಿಯ ವಾಟಾಳ್ ನಾಗರಾಜ್.
ಗುರುವಾರ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಏಪ್ರಿಲ್ 12ರಂದು ಬಂದ್ ಗೆ ಕರೆ ಕೊಟ್ಟಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ಬಂದ್ ಗೆ ಕರೆ ನೀಡುವುದಾಗಿ ಅವರು ತಿಳಿಸಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ತಮಿಳುನಾಡಿನಲ್ಲಿ ಭಾರಿ ಹೋರಾಟ ನಡೆಯುತ್ತಿರುವ ವೇಳೆಯಲ್ಲೇ ಮಂಡಳಿ ರಚನೆ ಮಾಡಬಾರದು ಎಂದು ವಾಟಾಳ್ ಹೇಳಿರುವುದು ಇಲ್ಲಿ ಗಮನಾರ್ಹ. ನಾವು ಹೋರಾಟಕ್ಕಿಳಿಯುವ ಯೋಚನೆಯಲ್ಲಿರಲಿಲ್ಲ. ತಮಿಳರೇ ನಮ್ಮನ್ನು ಹೋರಾಟಕ್ಕಿಳಿಯುವಂತೆ ಮಾಡಿದ್ದಾರೆ’ ಎಂದು ಕಿಡಿ ಕಾರಿರುವ ವಾಟಾಳ್, ದಕ್ಷಿಣ ಭಾರತದ ಸೂಪರ್ ಸ್ಟಾರುಗಳಾದ ರಜನೀಕಾಂತ್ ಮತ್ತು ಕಮಲಹಾಸನ್ ಅವರ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಮತ್ತೊಂದು ಎಚ್ಚರಿಕೆಯನ್ನೂ ವಾಟಾಳ್ ನೀಡಿದ್ದಾರೆ.
ಈ ನಡುವೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದು, ಚುನಾವಣೆ ಸಂದರ್ಭ ಬಂದ್, ಭಾವನಾತ್ಮಕವಾಗಿಯಷ್ಟೇ ಅಲ್ಲ, ರಾಜಕೀಯವಾಗಿಯೂ ಜನರನ್ನು ಹೇಗೆ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕು.