ಶಿಕ್ಷಕ ಮಗುವಿಗೆ ಕೇವಲ ವಿಷಯ ಹೇರುವಕಾರ್ಯ ನಡೆಸದೇ ಮಗುವಿನ ಅಂತರಂಗಅರಿತು ಮಗುವಿಗೆ ಬದುಕಿನ ದಿಕ್ಕು ತೋರಿಸುವ ಕಾರ್ಯ ನಡೆಸಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ವಿವೇಕಾನಂದ ಮತ್ತು ಶ್ರೀರಾಮ ವರ್ತುಲಗಳ ಶೈಕ್ಷಣಿಕ ಕಾರ್‍ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾರ್ಗದರ್ಶನ ನೀಡಿದರು.
ಭಾರತೀಯ ಸಂಸ್ಕೃತಿ ಪ್ರಪಂಚದ ಉಳಿದ ಸಂಸ್ಕೃತಿಗಿಂತ ವಿಭಿನ್ನವಾಗಿದೆ. ಭಾರತೀಯ ಸಂಸ್ಕೃತಿಯು ಪ್ರಪಂಚದ ಕೇವಲ ಬಾಹ್ಯವಿಚಾರಗಳ ಬಗ್ಗೆ ಯೋಚಿಸದೇ ಆಂತರಿಕ ಸತ್ಯದ ಹುಡುಕಾಟ ನಡೆಸುತ್ತದೆ. ಆದುದರಿಂದ ನಮ್ಮ ಸಂಸ್ಕೃತಿ ನಿತ್ಯ ನಿರಂತರ ಹರಿಯುವಿಕೆಯ ಪ್ರಕ್ರಿಯೆಯನ್ನು ಹೊಂದಿದೆ ಎಂದು ಅವರು ಹೇಳಿದರು.
ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿ, ಶ್ರೀರಾಮ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು, ಶ್ರೀದೇವಿ ಪ್ರೌಢಶಾಲೆ ಪುಣಚದ ಶಿಕ್ಷಕಿ ಗಂಗಾ ಮಾತಾಜಿ, ಶ್ರೀದೇವಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಲೋಕೇಶ್, ವಿವೇಕಾನಂದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ನಳಿನಿ ವಾಗ್ಲೆ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಹಿರಿಯ ಶಿಕ್ಷಕಿ ಪುಷ್ಪಲತಾ, ಸಂಪನ್ಮೂಲ ವ್ಯಕ್ತಿಯಾದ ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿ ಲೋಕಯ್ಯ ಡಿ ಉಪಸ್ಥಿತರಿದ್ದರು.
ಶ್ರೀರಾಮ ಪ್ರೌಢಶಾಲಾ ಕಲಾಶಿಕ್ಷಕ ಜಿನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್‍ಯಾಗಾರ ಸಹಸಂಯೋಜಕರಾದ ಚಂದ್ರಶೇಖರ ಸ್ವಾಗತಿಸಿ, ಶ್ರೀರಾಮ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಗೋಪಾಲ್ ವಂದಿಸಿದರು. ಲೋಕಯ್ಯ ಡಿ, ಪ್ರದೀಪ್, ಗಂಗಾಧರ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
ಕಾರ್‍ಯಾಗಾರದಲ್ಲಿ ಶ್ರೀರಾಮ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ, ಶ್ರೀದೇವಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಪುಣಚ, ವಿವೇಕಾನಂದ ಆಂಗ್ಲಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿದರು.