ರೋಟರಿ ಕ್ಲಬ್‌ನ ಸ್ವರ್ಣ ವರ್ಷ ಆಚರಣೆಯ ಅಂಗವಾಗಿ ನಿರ್ಮಿಸಿದ ಗೋಲ್ಡನ್ ಜ್ಯುಬಿಲಿ ಸಭಾಂಗಣ ಉತ್ತಮವಾಗಿ, ಎಲ್ಲಾ ಸೌಕರ್ಯಗಳಿಂದ ನಿರ್ಮಾಣ ಆಗಿದೆ ಇದರ ಶ್ರೇಯಸ್ಸು ಕ್ಲಬ್ ಅಧ್ಯಕ್ಷರ ಸಹಿತ ಎಲ್ಲ ಪದಾಧಿಕಾರಿಗಳು, ಸದಸ್ಯರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಗವರ್ನರ್ ರೊ| ಎಂ.ಪಿ.ಎಚ್ ಎಫ್ ಎಂ. ಎಂ. ಸುರೇಶ್ ಚೆಂಗಪ್ಪ ಹೇಳಿದರು
ರೋಟರಿ ಕ್ಲಬ್ ಬಂಟ್ವಾಳ ಗೋಲ್ಡನ್ ಜ್ಯುಬಿಲಿ ಹಾಲ್ ಉದ್ಘಾಟಿಸಿ ಮಾತನಾಡಿದರು. ಕಟ್ಟಡ ಸಮಿತಿ ಅಧ್ಯಕ್ಷ ರೊ| ಎಂಪಿಎಚ್‌ಎಫ್ ಎನ್. ಪ್ರಕಾಶ್ ಕಾರಂತ್ ಮಾತನಾಡಿ, ರೋಟರಿ ಕ್ಲಬ್ ಬಂಟ್ವಾಳ 1969ರಲ್ಲಿ ತಾಲೂಕು ಕೇಂದ್ರ ಬಿ.ಸಿ.ರೋಡ್‌ನಲ್ಲಿ ಪದಾರ್ಪಣೆಗೊಂಡಿತ್ತು. ನಮ್ಮ ಕ್ಲಬ್ ಕಳೆದ 48 ವರ್ಷಗಳಲ್ಲಿ ಸಹಸ್ರಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ ಎಂದರು.
ಕ್ಲಬ್ ಅಧ್ಯಕ್ಷರಾಗಿ ಬಿ. ಸಂಜೀವ ಪೂಜಾರಿ ಗುರುಕೃಪಾ ನೇತೃತ್ವದಲ್ಲಿ ಅಜ್ಜಿಬೆಟ್ಟು ಶಾಲೆಯ ಒಂದು ಕೊಠಡಿಯನ್ನು ನವೀಕರಣ, ಸಜೀಪನಡು ಹಿ.ಪ್ರಾ.ಶಾಲೆಯ ಶಾರದಾ ಕಲಾಮಂಟಪದ ನವೀಕರಣ, ನಾಟಿ ಅಂಗನವಾಡಿ ಕೊಠಡಿ ನವೀಕರಣ, ಸಾಲೆತ್ತೂರು ಗ್ರಾಮದಲ್ಲಿ ಮೂರು ಮನೆಗಳಿಗೆ ಶೌಚಾಲಯದ ನಿರ್ಮಾಣ, ನಾಟಿ ಹಿ.ಪ್ರಾ.ಶಾಲೆಗೆ ಧ್ವಜಸ್ತಂಭದ ಕೊಡುಗೆ, ಆರ್ಥಿಕವಾಗಿ ಹಿಂದುಳಿದ ಹಲವರಿಗೆ ಮನೆ ನಿರ್ಮಾಣಕ್ಕೆ ಸಹಾಯ, ಆನಾರೋಗ್ಯ ಪೀಡಿತರಿಗೆ ಔಷಽಗಾಗಿ ಸಹಾಯ, ಮೂರು ರಕ್ತದಾನ ಶಿಬಿರದ ಆಯೋಜನೆ, ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ, ಎರಡು ಮದ್ಯವರ್ಜನಾ ಶಿಬಿರ ಆಯೋಜನೆ, ರೋಟರಿ ಜಿಲ್ಲೆಯ ಲಕ್ಷ ವೃಕ್ಷ ಯೋಜನೆಯಡಿ ಒಟ್ಟು ಸುಮಾರು 2500 ಸಸಿಗಳ ವಿತರಣೆ, 73 ಸದಸ್ಯರನ್ನೊಳಗೊಂಡ ನೂತನ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್‌ನ ಸ್ಥಾಪನೆ. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋಟರಾಕ್ಟ್ ಕ್ಲಬ್‌ನ ಸ್ಥಾಪನೆ. ಸರಕಾರಿ ಪ್ರೌಢಶಾಲೆ ಮಣಿನಾಲ್ಕೂರಿನಲ್ಲಿ ಇಂಟರಾಕ್ಟ್ ಕ್ಲಬ್‌ನ ಸ್ಥಾಪನೆ ಮೊದಲಾದ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾಗಿ ತಿಳಿಸಿದರು.
ಬಂಟ್ವಾಳ ತಾಲೂಕಿನ 12 ಪ್ರೌಢ ಮತ್ತು ಪ.ಪೂ.ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ದುಶ್ಚಟಗಳ ದುಷ್ಪರಿಣಾಮದ ಬಗ್ಗೆ ಮಾಹಿತಿ ಕಾರ್ಯಗಾರವು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈಗಾಗಲೇ ನಡೆದಿರುತ್ತದೆ ಎಂದರು.
ವೇದಿಕೆಯಲ್ಲಿ ನಿಯೋಜಿತ ಜಿಲ್ಲಾ ಗವರ್ನರ್ ರೊ| ಎಂ.ಪಿ.ಎಚ್. ಎಫ್. ರೋಹಿನಾಥ್ ಪಾದೆ , ವಲಯ ಅಸಿಸ್ಟೆಂಟ್ ಗವರ್ನರ್ ರೊ| ಎಂ.ಪಿ.ಎಚ್. ಎಫ್. ಎ.ಎಂ.ಕುಮಾರ್, ಪಿಡಿಜಿಗಳಾದ ಕೃಷ್ಣ ಶೆಟ್ಟಿ, ಸೂರ್ಯ ಪ್ರಕಾಶ್ ಭಟ್, ವಿಶ್ವನಾಥ ಮಲ್ಯ, ಟ್ರಸ್ಟ್ ಅಧ್ಯಕ್ಷ ರಮೇಶಾನಂದ ಸೋಮಯಾಜಿ, ಕಾರ್ಯದರ್ಶಿ ಐತಪ್ಪ ಆಳ್ವ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಕಾರ್ಯದರ್ಶಿ ಕೆ. ನಾರಾಯಣ ಹೆಗ್ಡೆ ಮತ್ತು ಪ್ರಮುಖರು ಉಪಸ್ಥಿತರಿದ್ದರು.