www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮಂಗಳವಾರ ರೋಟರಿ ಕ್ಲಬ್ ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ರೋಟರಿ ಜಿಲ್ಲೆಯಲ್ಲಿ 1 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿತ್ತು.ಆದರೆ ಪ್ರತಿಯೊಬ್ಬ ರೋಟರಿಯನ್ ಕೂಡ ಸಸಿ ನೆಡುವ ಮೂಲಕ ಸುಮಾರು ಎರಡು ಲಕ್ಷ ಸಸಿ ನೆಡಲಾಗಿದೆ ಎಂದರು. ಸ್ವಚ್ಚತಾ ಅಭಿಯಾನ,ವಿದ್ಯುತ್ ಸೌಲಭ್ಯವಿಲ್ಲದ ಮನೆಯನ್ನು ಗುರುತಿಸಿ ಸೌರ ವಿದ್ಯುತ್ ದೀಪ ಅಳವಡಿಸುವ ಕಾರ್ಯ ನಡೆದಿದೆ. ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಶಂಭೂರಿನಲ್ಲಿ 9 ಮನೆಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ರೋಟರಿ ಸಂಸ್ಥೆಯ ಪೋಲಿಯೋ ಮುಕ್ತ ಅಭಿಯಾನ ವಿಶ್ವದಲ್ಲಿಯೇ ಯಶಸ್ವಿಯಾದ ಕಾರ್ಯಕ್ರಮವಾಗಿದ್ದು, ಮುಂದಿನ ಎರಡು ವರ್ಷದಲ್ಲಿ ಸಂಪೂರ್ಣ ಗುರಿ ಸಾಧಿಸಲಿದ್ದೇವೆ ಎಂದರು. ದೇಶವನ್ನು ಟಿ.ಬಿ.ಮುಕ್ತ ವನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಚರ್ಚೆ ನಡೆಯುತ್ತಿದೆ ಎಂದರು.
ಸಮಾಜದಲ್ಲಿ ಶಾಂತಿ, ಕುಡಿಯುವ ನೀರು,ಶಿಕ್ಷಣ,ಸಮುದಾಯ ಅಭಿವೃದ್ದಿ ಸಹಿತ ಆರು ವಿಭಾಗದಲ್ಲಿ ರೋಟರಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಸಂಸ್ಥೆಯ ವತಿಯಿಂದ ನಡೆಯುವ ಎಲ್ಲಾ ಜನಪಯೋಗಿ ಕಾರ್ಯಗಳಿಗೆ ರೋಟರಿ ಸದಸ್ಯರೇ ಹಣ ಹೂಡುತ್ತಾರೆ ಎಂದ ಅವರು ರೋಟರಿ 3181 ಜಿಲ್ಲೆಯಲ್ಲಿ 73 ಕ್ಲಬ್ ಗಳನ್ನು ಹೊಂದಿವೆ, ಇವೆಲ್ಲವೂ ಉದ್ದೇಶಿತ ಗುರಿ ಸಾಧನೆಗಾಗಿ ಕೆಲಸ ನಿರ್ವಹಿಸುತ್ತಿವೆ ಎಂದರು.ಬಂಟ್ವಾಳ ರೋಟರಿಗೆ ಎರಡು ದಿನಗಳ ಅಧಿಕೃತ ಭೇಟಿಯ ಪ್ರವಾಸದ ಸಂದರ್ಭದಲ್ಲಿ ಗವರ್ನರ್ ಸುರೇಶ್ ಚಂಗಪ್ಪ ಅವರು, ಮಯ್ಯರಬೈಲ್ ಬೋರುಗುಡ್ಡೆಯಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ, ಕ್ಲಬ್ ನ ಸುಸಜ್ಜಿತ ಕಟ್ಟಡದ ಉದ್ಘಟನೆ ನೆರವೇರಿಸಿದರು ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ ಈ ಸಂದರ್ಭ ತಿಳಿಸಿದರು. ಶಂಭೂರು ಸರಕಾರಿಯ ಶಾಲೆಗೆ ಸಚಿವ ರೈ,ಜಿಪಂ ಸದಸ್ಯೆ ಕಮಾಲಾಕ್ಷಿ ಹಾಗೂ ರೋಟರಿ ಸಂಸ್ಥೆ ಸೇರಿದಂತೆ ಸುಮಾರು14 ಲಕ್ಷ ದಲ್ಲಿ ನಿರ್ಮಾಣವಾದ ಕಟ್ಟಡ ಮಣಿನಾಲ್ಕೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 7 ಲಕ್ಷ ರೂ .ವೆಚ್ಚದಲ್ಲಿ ನಿರ್ಮಾಣವಾದ ರಂಗಮಂದಿರ ಮತ್ತು ಬಡಕೊಟ್ಟು ಎಂಬಲ್ಲಿ ಅಂಗನವಾಡಿ ಕೇಂದ್ರವನ್ನು ಗವರ್ನರ್ ಸುರೇಶ್ ಚಂಗಪ್ಪ ಲೋಕಾರ್ಪಣೆ ಗೊಳಿಸಿದ್ದಾರೆ ಎಂದರು.
ವಲಯ -4 ರ ಅಸಿಸ್ಟಂಟ್ ಗವರ್ನರ್ ಎ.ಎಂ.ಕುಮಾರ್, ಪ್ರಮುಖರಾದ ಕರುಣಾಕರ ರೈ, ನಾರಾಯಣ ಹೆಗ್ಡೆ, ಅಶ್ವನಿ ಕುಮಾರ್ ರೈ, ಬಂಟ್ವಾಳ ರೋಟರಿ ನಿಯೋಜಿತ ಅಧ್ಯಕ್ಷ ಮಂಜುನಾಥ ಆಚಾರ್ಯ, ಪ್ರಕಾಶ ಕಾರಂತ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.