ಬಂಟ್ಟಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕ ಬೋಳಂತೂರು ರಸ್ತೆಯ ಮಾಣಿಮಜಲು ಎಂಬಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಶಿಫಾರಸಿನಂತೆ ಕೇಂದ್ರದ 1 ಕೋಟಿ 95 ಲಕ್ಷ ಅನುದಾನಲ್ಲಿ ನಿರ್ಮಿಸಿದ ರೈಲ್ವೆ ಮೇಲ್ಸೆತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕಾಮಗಾರಿ ಕೊನೆಯ ಹಂತದಲ್ಲಿದ್ದು ಸೀಮೆಯ ದೇವಸ್ಥಾನ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಬ್ರಹ್ಮಕಲಶ ಮತ್ತು ಜಾತ್ರೋತ್ಸವ ನಡೆಯುತ್ತಿರುವುದರಿಂದ ಭಕ್ತಾದಿಗಳಿಗಾಗುತ್ತಿರುವ ತೊಂದರೆಯನ್ನು ಮನಗಂಡು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆಯಂತೆ ರೈಲ್ವೆ ಅಭಿಯಂತರರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಾಮಗಾರಿ ಪರಿಶೀಲಿಸಿ ವಾಹನಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಮಯದಲ್ಲಿ ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ,ಯುವ ಮೋರ್ಚಾ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ,ಜಿ.ಪಂ ಸದಸ್ಯರಾದ ಕಮಲಾಕ್ಷಿ.ಕೆ, ತಾ.ಪಂ ಸದಸ್ಯರಾದ ಮಹಾಬಲ ಆಳ್ವ, ಪಂಚಾಯತ್ ಸದಸ್ಯರಾದ ಜಯಶ್ರೀ,ಲಲಿತ,ಶೇಖರ ಕೊಟ್ಟಾರಿ, ರಾಜೇಶ್ ಕೊಟ್ಟಾರಿ, ಮೋನಪ್ಪ ದೇವಸ್ಯ, ಜಯರಾಮ ರೈ ಬೋಳಂತೂರು, ಜಗನ್ನಾಥ ಕುಲಾಲ್ ನೆಟ್ಲ, ಜಗದೀಶ ನೆಟ್ಲ, ಬಾಲಕೃಷ್ಣ ಕೊಟ್ಟಾರಿ, ಸುಜಿತ್ ಕೊಟ್ಟಾರಿ, ಆನಂದ ಆಳ್ವ, ಧೀರಜ್, ವಾಸು, ನವೀನ್ ಶೆಟ್ಟಿ ನೆಟ್ಲ, ಯೋಗೀಶ್ ನೆಟ್ಲ ಉಪಸ್ಥಿತರಿದ್ದರು.