ಬಂಟ್ವಾಳ

ಎ. 9ರಿಂದ ಇಮಾಂ ಶಾಫಿ ಅಕಾಡಮಿಯ ದಶಮಾನೋತ್ಸವ, ಪ್ರಥಮ ಸನದುಪ್ರದಾನ ಸಮ್ಮೇಳನ

ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಾದ ಕಾಸರಗೋಡು ಇಮಾಂ ಶಾಫಿ ಇಸ್ಲಾಮಿಕ್ ಅಕಾಡಮಿ ಇದರ ದಶಮಾನೋತ್ಸವ ಹಾಗೂ ಪ್ರಥಮ ಸನದು ಪ್ರದಾನ ಸಮ್ಮೇಳನವು ಎ.9 ರಿಂದ 15ರವರೆಗೆ ಅಕಾಡಮಿಯ ವಠಾರದಲ್ಲಿ ನಡೆಯಲಿದೆ. ಈ ಸಮ್ಮೇಳನದ ಪ್ರಚಾರಾರ್ಥ ಎ.1ರಿಂದ 5ರವರೆಗೆ ದ.ಕ.ಜಿಲ್ಲೆಯಾದ್ಯಂತ ವಾಹನಾ ಪ್ರಚಾರ ನಡೆಯಲಿದ್ದು, ಎ. 1ರಂದು ಪ್ರಮುಖ ಉಲಮಾ-ಉಮರಾ ನಾಯಕರ ಉಪಸ್ಥಿತಿಯಲ್ಲಿ ಮಂಗಳೂರಿನ ಉಳ್ಳಾಲ ಸೈಯದ್ ಮದನಿ ದರ್ಗಾ ವಠಾರದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ದಾರಿಮೀಸ್ ರಾಜ್ಯ ಸಮಿತಿ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಹೇಳಿದ್ದಾರೆ.
ಮಂಗಳವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಮಸ್ತ” ಉಲಮಾ ಸಂಘಟನೆಯ ಮುಖಂಡರು, ಹಿರಿಯ ವಿದ್ವಾಂಸರಾದ ಆದ ಶೈಖುನಾ ಎಂ.ಎ.ಖಾಸಿಂ ಉಸ್ತಾದ್ ಸಾರಥ್ಯದಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯಲ್ಲಿ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮನ್ವಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ.  ಅಲ್ಲದೆ, ಮಹಿಳೆಯರಿಗಾಗಿ ಸಂಸ್ಥೆಯ ಅಧೀನದಲ್ಲಿ ಅತ್ಯಾಧುನಿಕ ಪಠ್ಯಕ್ರಮದಡಿ ಶಿಕ್ಷಣ ನೀಡುವ ಮಹಿಳಾ ಕಾಲೇಜು ಕೂಡ ಯಶಸ್ವಿಯಾಗಿ ಕಾರ್ಯಚರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಇದೀಗ ಸೀನಿಯರ್ ದಅವಾ ಕಾಲೇಜ್, ಜ್ಯೂನಿಯರ್ ದಅವಾ ಕಾಲೇಜ್, ವಾಫೀ  ಕಾಲೇಜ್, ಹಿಫುಲುಲ್ ಕುರ್‌ಆನ್ ಕಾಲೇಜ್ ಹಾಗೂ ಮಹಿಳಾ ಕಾಲೇಜ್ ಮೂಲಕ ಬಹುಮುಖ ವಿದ್ಯಾಸಂಸ್ಥೆಗಳು ಕಾರ್ಯಾಚರಿಸುತ್ತಿದೆ ಎಂದ ಅವರು, ಈ ಸಮ್ಮೇಳನದಲ್ಲಿ ಸಮಸ್ತದ ಪ್ರಮುಖ ವಿದ್ಯಾಂಸರು, ದೇಶ ವಿದೇಶಗಳ ಗಣ್ಯರು,  ಚಿಂತಕರು, ಕೇರಳ ಹಾಗೂ ಕರ್ನಾಟಕದ ಹಲವಾರು ಸಚಿವರು ಮತ್ತು ಶಾಸಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗುರುಪುರ ರೆಂಜ್‌ನ ಜಂಇಯ್ಯತುಲ್ ಮುಅಲ್ಲಿಂ ಅಧ್ಯಕ್ಷ ಕೆ.ವಿ ಮಜೀದ್ ದಾರಿಮಿ ಕುಂಬ್ರ, ಕರ್ನಾಟಕ ರೌಳತುಲ್ ಉಲಮಾದ ಕಾರ್ಯದರ್ಶಿ ಕೆ.ಎಚ್ ಅಶ್ರಫ್ ಹನೀಫಿ ಉಪ್ಪಿನಂಗಡಿ, ದಾರಿಮೀಸ್‌ನ ಜಿಲ್ಲಾಧ್ಯಕ್ಷ ಕೆ.ಬಿ ಅಬ್ದುಲ್ ಕಾದರ್ ದಾರಿಮಿ, ಸಮಸ್ತ ವಿದ್ಯಾಭ್ಯಾಸ ಬೋರ್ಡ್‌ನ ಸದಸ್ಯ ರಸೀದ್ ಹಾಜಿ ಪರ್ಲಡ್ಕ ಉಪಸ್ಥಿತರಿದ್ದರು.
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

10 hours ago