www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಪಾಣೆಮಂಗಳೂರು ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯದಲ್ಲಿ 2017ರ ಭವ್ಯ ಮಂಗಲ ವರ್ಷಾಯೋಗ ಚಾತುರ್ಮಾಸ ಆಚರಿಸಿದ ಪರಮ ಪೂಜ್ಯ 108 ಮುನಿಶ್ರೀ ವೀರ ಸಾಗರ ಮಹಾರಾಜರ ಪರಮ ಗುರುಗಳಾದ, ಕ್ರಾಂತಿ ರತ್ನ, ಯುವ ಸಾಮ್ರಾಟ್, ಆಚಾರ್ಯ ಶ್ರೀ 108 ಚಂದ್ರಪ್ರಭ ಸಾಗರ ಮಹಾರಾಜರು ಬಂಟ್ವಾಳದಲ್ಲಿ ಸೋಮವಾರ ಸಂಜೆ ವಿಹಾರ ಕೈಗೊಂಡರು.
ಈ ಸಂದರ್ಭ ಜೈನ ಸಮಾಜದ ಪ್ರಮುಖರಾದ ಸುದರ್ಶನ ಜೈನ್, ರತ್ನಾಕರ ಜೈನ್ ಮಂಗಳೂರು, ಹರ್ಷರಾಜ ಬಲ್ಲಾಳ್, ಸುಭಾಶ್ಚಂದ್ರ ಜೈನ್, ಭರತ್ ರಾಜ್ ಪಾಪುದಡ್ಕ, ಧರಣೇಂದ್ರ ಇಂದ್ರ ಪಾಣೆಮಂಗಳೂರು, ಭುವನೇಂದ್ರ ಇಂದ್ರ, ದೀಪಕ್ ಜೈನ್ ವಗ್ಗ, ವಿಜಯಕುಮಾರಿ ಇಂದ್ರ, ಪ್ರವೀಣ್ ಚಂದ್ರ ಕರ್ಬೆಟ್ಟು ಮೊದಲಾದವರು ಉಪಸ್ಥಿತರಿದ್ದು, ಆಚಾರ್ಯಶ್ರೀಗಳ ಆಶೀರ್ವಾದ ಪಡೆದರು,
ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಅತ್ಯಂತ ವೈಭವದ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಮಹಾರಾಜರು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪಾಣೆಮಂಗಳೂರು ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯಕ್ಕೆ ಮಂಗಲ ವಿಹಾರ ಮಾಡಿದ್ದಾರೆ. ಸೋಮವಾರ ವಗ್ಗ ದಲ್ಲಿ ಆಹಾರ ಚರ್ಯೆ ಸಂಪನ್ನಗೊಂಡು, ಬಂಟ್ವಾಳ ಬಸದಿಗೆ ವಿಹಾರ ಮಾಡಿದ ಬಳಿಕ ಪಾಣೆಮಂಗಳೂರಿನಲ್ಲಿ ವಿಹಾರ ಕೈಗೊಂಡರು. ಮಂಗಳವಾರ, ಅಪರಾಹ್ನ 3 ರಿಂದ ಕೊಯಿಲ, ಸಿದ್ಧಕಟ್ಟೆ, ವೇಣೂರು ಮುಖಾಂತರ ವಿಹಾರ ಮಾಡಿ, ಮೂಡುಬಿದಿರೆಯಲ್ಲಿ ನಡೆಯುವ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲಿರುತ್ತಾರೆ ಎಂದು ಸುದರ್ಶನ ಜೈನ್ ತಿಳಿಸಿದ್ದಾರೆ.