ಕ್ರೈಸ್ತ ಬಾಂಧವರ ಪವಿತ್ರ ದಿನವಾದ ಪಾಮ್ ಸಂಡೇ ಆಚರಣೆ ಭಾನುವಾರ ಬಂಟ್ವಾಳ ತಾಲೂಕಿನ ಲೊರೆಟ್ಟೋ ಮಾತಾ ಚರ್ಚ್ ನಲ್ಲಿ ನಡೆಯಿತು.
ಯೇಸು ಕ್ರಿಸ್ತರನ್ನು ಶಿಲುಬೆಗೆ ಏರಿಸುವ ದುಃಖದ ದಿನಗಳನ್ನು ನೆನಪಿಸುವ ಕ್ರೈಸ್ತ ಬಾಂಧವರು ಭಾನುವಾರದಿಂದ ಪವಿತ್ರ ವಾರವಾಗಿ ಆಚರಿಸುತ್ತಾರೆ. ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚರ್ಚ್ ಧರ್ಮಗುರುಗಳಾದ ವಂ. ಎಲಿಯಸ್ ಡಿಸೋಜಾ ವಿಶೇಷ ಪ್ರಾರ್ಥನೆ ಹಾಗೂ ಬಲಿ ಪೂಜೆಯನ್ನು ಅರ್ಪಿಸಿದರು. ಈ ಸಂದರ್ಭ ಪಾಲನಾ ಮಂಡಳಿ ಉಪಾಧ್ಯಕ್ಷ ರಿಚರ್ಡ್ ಮೆನೇಜಸ್, ಕಾರ್ಯದರ್ಶಿ ಸಿಪ್ರಿಯನ್ ಡಿಸೋಜ, ಚರ್ಚ್ ವಾಳೆಗಳ ಗುರ್ಕಾರ್ ಗಳು, ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು. ಚರ್ಚ್ ಪಾಲನಾ ಮಂಡಳಿ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿತ್ತು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…