ಇಂದು ಹಲವಾರು ಸಂಘ, ಸಂಸ್ಥೆಗಳು ಹಳ್ಳಿ, ಪಟ್ಟಣ ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಪ್ರಭಾವ ಜಾಸ್ತಿ. ಕಲ್ಲಡ್ಕ ಸಮೀಪ ನೆಟ್ಲ ಪರಿಸರದ ಯುವಕರ ತಂಡವೊಂದು ಸಮಾಜ ಸೇವೆಯನ್ನಷ್ಟೇ ಉದ್ದೇಶವಾಗಿಟ್ಟುಕೊಂಡು ಕಾರ್ಯಾಚರಣೆ ಆರಂಭಸಿವೆ. ಸಂಘಟನೆ ಹೆಸರು ಕುಟುಂಬ. ರಾಜಕೀಯ ಪಕ್ಷದ ಅಂಗಸಂಸ್ಥೆ ಇದಲ್ಲ ಎಂಬ ಟ್ಯಾಗ್ ಲೈನ್ ಇದಕ್ಕಿದೆ.
ಮಾರ್ಚ್ 18ರಂದು ಶ್ರೀ ನಿಟಿಲಾಕ್ಷ ಸದಾಶಿವ ದೇವರಿಗೆ ಸಂಜೆ ಗೋಧೂಳಿ ಲಗ್ನದ ಶುಭ ಮುಹೂರ್ತದ ಯುಗಾದಿಯ ದಿವಸದಂದು ಪೂಜೆಯನ್ನು ಅರ್ಪಿಸುವ ಮೂಲಕ ಕುಟುಂಬ ಸಮಾಜಸೇವಾ ಸಂಸ್ಥೆ ಆರಂಭಗೊಂಡಿತು.
ಧನಂಜಯ ಗುಂಡಿಮಜಲು ಅಧ್ಯಕ್ಷರಾಗಿ ಹಾಗೂ ದಿನೇಶ್ ಕೆದ್ಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕುಟುಂಬದಲ್ಲಿ ಕಾರ್ಯದರ್ಶಿಗಳು ಗೋಪಾಲಕೃಷ್ಣ ಗುಂಡಿಮಜಲು, ಪುರುಷೋತ್ತಮ ಗೋಳ್ತಮಜಲು. ಪ್ರಮುಖ ಸದಸ್ಯರಾಗಿ ಉದಯ ಕೊಟ್ಟಾರಿ ಮಡ್ಯಮಜಲು, ಲಕ್ಷ್ಮಣ ಬಳ್ಳಟ, ದಿನೇಶ್ ಪೂಜಾರಿ ವೀರಕಂಭ, ನವೀನ್ ಗುಂಡಿಮಜಲು, ನಾರಾಯಣ ಬಳ್ಳಟ. ಹೆಸರಿಗಷ್ಟೇ ಪದಾಧಿಕಾರಿಗಳು. ನಾವೆಲ್ಲರೂ ಅಧ್ಯಕ್ಷ, ಸದಸ್ಯ ಎಂಬ ಬೇಧವಿಲ್ಲದೆ ಒಟ್ಟಾಗಿ ಸಮಾಜಸೇವೆಗೆ ಧುಮುಕಿದ್ದೇವೆ ಎನ್ನುತ್ತಾರೆ ಕುಟಂಬದ ಟೀಮ್. ನಿಟಿಲಾಪುರದಲ್ಲಿ ನಡೆಯುವ ಬ್ರಹ್ಮಕಲಶ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನೀಲಿ ಬಣ್ಣದ ಟೀಶರ್ಟ್ ಧರಿಸಿದ ಕುಟುಂಬದ ಸದಸ್ಯರು ನೆರವೇರಿಸುವುದರ ಮೂಲಕ ಭಕ್ತರ ಪ್ರಶಂಸೆಗೂ ಪಾತ್ರರಾದರು.