ನಿಮ್ಮ ಯಶಸ್ಸನ್ನು ನಿರ್ಧರಿಸುವುದು ಮತ್ತೊಬ್ಬರು, ಆದರೆ ತೃಪ್ತಿ ನಿಮ್ಮೊಳಗೇ ಇದೆ ಎಂದು ತರಬೇತುದಾರ ಪ್ರೊ. ವೃಷಭರಾಜ್ ಹೇಳಿದರು.
ಬಿ.ಸಿ.ರೋಡಿನಲ್ಲಿ ಜೇಸಿ ಜೋಡುಮಾರ್ಗ ನೇತ್ರಾವತಿ, ಜೇಸಿರೆಟ್ ವಿಭಾಗ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಹಕಾರದಿಂದ ಮಾನವೀಯ ಸಂಬಂಧಗಳು ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಂತೋಷಪಡುವುದು, ನಗುವುದನ್ನು ಕಲಿತರೆ ಆರೋಗ್ಯಪೂರ್ಣ ಬದುಕು ಸಾಗಿಸಲು ಸಾಧ್ಯ, ಜಗಳ, ಸಿಟ್ಟು, ನೆಗೆಟಿವ್ ಆಲೋಚನೆಗಳನ್ನು ಮಾಡಿದರೆ ಆರೋಗ್ಯ ಹದಗೆಡುವುದು ನಿಶ್ಚಿತ, ನಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ಕಲಿಯಬೇಕು ಎಂದು ಉದಾಹರಣೆ ಸಹಿತವಾಗಿ ತಿಳಿಸಿದರು.
ಅಧ್ಯಕ್ಷತೆ ಯನ್ನು ಜೇಸೀ ಜೋಡುಮಾರ್ಗ ನೇತ್ರಾವತಿ ಯ ಅಧ್ಯಕ್ಷರಾದ ಸವಿತಾ ನಿರ್ಮಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಜೇಸೀ ಐ ಮಂಗಳೂರು ಸಾಮ್ರಾಟ್ ಇದರ ಅಧ್ಯಕ್ಷ ರಾದ ಡಾ. ರಾಘವೇಂದ್ರ ಹೊಳ್ಳ. ಜೇಸಿರೆಟ್ ಅಧ್ಯಕ್ಷ ರಾದ ಗಾಯತ್ರಿ ಲೋಕೇಶ್ ಉಪಸ್ತಿತರಿದ್ದರು. ಜೇಸಿ ಮಾಜಿ ಅಧ್ಯಕ್ಷ ರಾದ ಉಮೇಶ್ ನಿರ್ಮಲ್ ಗಣ್ಯ ರನ್ನು ವೇದಿಕೆ ಗೆ ಆಮಂತ್ರಿಸಿದರು .ಕಾರ್ಯದರ್ಶಿ ಹರ್ಷರಾಜ್ ಧನ್ಯವಾದ ಸಲ್ಲಿಸಿದರು. ವಿವಿಧ ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.