ಬ್ರಹ್ಮಕಲಶ ಸಂಭ್ರಮದಲ್ಲಿರುವ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ಸ್ಥಾನದಿಂದ ಕೈ ಬಿಡುವಂತೆ ದಕ್ಷಿಣ ಕನ್ನಡ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲ್ ಸಮಿತಿ ಕಾರ್ಯಾಧ್ಯಕ್ಷರಿಗೆ ಪತ್ರದ ಮೂಲಕ ಕೋರಿದ್ದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷನನ್ನಾಗಿ ತನ್ನನ್ನು ಪರಿಗಣಿಸಿರುವ ಕುರಿತಾಗಿ ತಿಳಿದು ಬಂದಿದ್ದು,ಈ ಸಂದರ್ಭದಲ್ಲಿ ಲೋಕಸಭಾ ಅಧಿವೇಶನ ನಡೆಯುವುದರಿಂದ ಇದರಲ್ಲಿ ಕಡ್ಡಾಯವಾಗಿ ಹಾಜರಾಗಬೇಕಾಗಿದೆ. ಹಾಗಾಗಿ ಗೌರವಾಧ್ಯಕ್ಷನಾಗಿ ಸಕ್ರಿಯವಾಗಿ ಭಾಗವಹಿಸಲು ಅಸಾಧ್ಯವಾಗಿರುವ ಹಿನ್ನಲೆಯಲ್ಲಿ ತನ್ನನ್ನು ಈ ಸ್ಥಾನದಿಂದಕೈಬಿಡಬೇಕು ಎಂದು ಅವರು ಕೋರಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…