ಬಂಟ್ವಾಳ ತಾಲೂಕಿನ ಇನೋಳಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಓಫ್ ಟೆಕ್ನಾಲಾಜಿ ಇದರ ಪ್ರಥಮ ವರ್ಷದ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ಡಾ ಏ ಎಂ ಖಾನ್ ಅವರು ಮಾತನಾಡಿ ತಂತ್ರಜ್ಞಾನದಲ್ಲಿ ವಿಜ್ಞಾನದ ಮಹತ್ವ ಸೈನ್ಸ್ ತಾಂತ್ರಿಕ ಕ್ಷೇತ್ರದಲ್ಲಿ ಆದ ಮಹತ್ವದ ಬೆಳವಣಿಗೆ ಹಾಗೂ ತಂತ್ರಜ್ಞಾನದ ಒಳಿತು ಕೆಡುಕುಗಳನ್ನು ವಿವರಿಸಿದರು.
ಪ್ರಥಮ ವರ್ಷದ ವಿಭಾಗದ ಮುಖ್ಯಸ್ಥರಾದ ಡಾ ಅಂಜುಮ್ ಖಾನ್ ಅವರು ವಿಜ್ಞಾನಕ್ಕೆ ಸರ್.ವಿ ರಾಮನ್ ಕೊಡುಗೆಯನ್ನು ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲ ಡಾ ಆಂಟೋನಿ ಅವರು ಮಾತನಾಡಿ ತಾಂತ್ರಿಕ ಕಲಿಕೆಯಲ್ಲಿ ಸಂಶೋಧನೆಯ ಮಹತ್ವವನ್ನು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ, ಸೈನ್ಸ್ ಮಾಡೆಲ್ ತಯಾರಿ, ವಿಜ್ಞಾನ ರಸ ಪ್ರಶ್ನೆ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಸಾಯನ ವಿಭಾಗದ ಉಪನ್ಯಾಸಕಿ ಪ್ರೊ ಇಮ್ರಾನ್ ಅಹ್ಮದ್ ವಿಜೇತರ ಹೆಸರನ್ನು ಘೋಷಿಸಿದರು.
ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಪ್ರೊ ವಿನುತಾ, ಪ್ರೊ ಝಮೀಲ್ ಅಹ್ಮದ್, ವಿದ್ಯಾರ್ಥಿ ಸಮ್ರ ನಾಜ್, ವಿದ್ಯಾರ್ಥಿ ಸುನೆಹ್ರ ಮರಿಯಮ್ ವಿವಿಧ ಜವಾಬ್ದಾರಿ ನಿಭಾಯಿಸಿದರು. ಕಾರ್ಯಕ್ರಮದಲ್ಲಿ ಅಗಲಿದ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಜಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ ಐ ಟಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ ಅಝೀಜ್ ಮುಸ್ತಫಾ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.