www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ವಿಟ್ಲ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಅವರು ಬಂಟ್ವಾಳ ತಾಲೂಕಿನ ಗೋಳ್ತಮಜಲು – ಅಮ್ಟೂರು ಗ್ರಾಮದ ರೈಲ್ವೇ ಕೆಳಸೇತುವೆ ಮತ್ತು ಸಂಪರ್ಕ ರಸ್ತೆಯನ್ನು ಸೋಮವಾರ ಉದ್ಘಾಟಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.
ಕೇಂದ್ರ ಸರಕಾರದ 1.68ಕೋಟಿ ಅನುದಾನದಲ್ಲಿ ಇದನ್ನು ನಿರ್ಮಿಸಿಲಾಗಿದ್ದು, ಜನರು ಸದುಪಯೋಗಪಡೆದುಕೊಳ್ಳಲಿ ಎಂದು ಅವರು ಹಾರೈಸಿದರು. ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ಮುಸ್ತಾಫಾ, ಪಂಚಾಯತ್ ಸದಸ್ಯರಾಧ ರಾಜೇಶ್ ಕೊಟ್ಟಾರಿ, ಗೋಪಾಲ ಪೂಜಾರಿ, ಗೋಪಾಲಕೃಷ್ಣ ಪೂವಳ, ಜಯಂತ ಗೌಡ, ಪ್ರಮಖರಾದ ವಜ್ರನಾಥ ಕಲ್ಲಡ್ಕ, ಸುಜಿತ್ ಕೊಟ್ಟಾರಿ, ರಮೇಶ್ ಶೆಟ್ಟಿಗಾರ್, ರೈಲ್ವೆ ಇಂಜಿನಿಯರ್ ಕೆ.ಪಿ ನಾಯ್ಡು. ಊರಿನ ಪ್ರಮಖರಾದ ನೋಣಯ್ಯ ಪೂಜಾರಿ ಮೊದಲಾದ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…