ಸಮಾಜದ ಶಾಂತಿ-ಸೌಹಾರ್ದತೆಗೆ ಮಹತ್ವದ ಕೊಡುಗೆ ನೀಡುವ ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಆಸ್ತಿಯಾಗಿ ಪರಿವರ್ತನೆಯಾಗಬೇಕು ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು.
ಭೂಯಾ ಸ್ಪೋರ್ಟ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ೨ನೇ ಆವೃತ್ತಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರುಯುವ ಸಮೂಹ ಕ್ರೀಡಾ ಕ್ಷೇತ್ರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಿಂಚನಗೈಯಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಹಾಗೂ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ ಸೌಹಾರ್ದ ಸಮಾಜ ನಿರ್ಮಾಣ ಯುವ ಸಮುದಾಯದ ಗುರಿಯಾಗಬೇಕು. ಆ ನಿಟ್ಟಿನಲ್ಲಿ ಯುವಕರು ತಮ್ಮ ಕಾರ್ಯಚಟುವಟಿಕೆಗಳನ್ನು ರೂಢಿಸಿಕೊಂಡು ಮುನ್ನಡೆಯಬೇಕು ಎಂದು ಹಾರೈಸಿದರು.
ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ತಾ ಪಂ ಉಪಾಧ್ಯಕ್ಷ ಬಿ ಎಂ ಆಬ್ಬಾಸ್ ಅಲಿ, ಬುಡಾ ಸದಸ್ಯ ಲತೀಫ್ ಖಾನ್ ಗೂಡಿನಬಳಿ, ಡಿಸಿಸಿ ಉಪಾಧ್ಯಕ್ಷ ಹಾಜಿ ಪಿ ಮುಹಮ್ಮದ್ ರಫೀಕ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಭೂನ್ಯಾಯ ಮಂಡಳಿ ಮಾಜಿ ಸದಸ್ಯ ಅಹ್ಮದ್ ಬಾವಾ ಯಾಸೀನ್, ಉದ್ಯಮಿಗಳಾದ ಅಬ್ದುಲ್ ರಹಿಮಾನ್ ಮೋನು ಮೆಲ್ಕಾರ್, ಅಬ್ದುಲ್ ಹಕೀಂ ಉಲ್ಲಾಸ್, ಪಿ ಬಿ ಹಾಮದ್ ಹಾಜಿ, ರಫೀಕ್ ಬೋಗೋಡಿ, ಮೋನು ಎಂ.ಎಂ. ದಾಸರಗುಡ್ಡೆ, ತಂಶೀರ್ ಮೆಲ್ಕಾರ್, ಅಶ್ರಫ್ ಎನ್.ಬಿ., ನಾಸಿರ್ ದುಬೈ, ರವಿ ಪಾಣೆಮಂಗಳೂರು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಭೂಯಾ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ, ಪಾಣೆಮಂಗಳೂರು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಬೋಗೋಡಿ ಸ್ವಾಗತಿಸಿ, ಅಝರ್ ಭೂಯಾ ಬಂಗ್ಲೆಗುಡ್ಡೆ ವಂದಿಸಿದರು. ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಎ ಟು ಝಡ್ ವಾರಿಯರ್‍ಸ್ ತಂಡ ಚಾಂಪಿಯನ್:
ಎಪಿಎಲ್ ೨ನೇ ಆವೃತ್ತಿಯ ಕ್ರಿಕೆಟ್ ಕೂಟದಲ್ಲಿ ಖಲಂದರ್ ರಿಯಾಝ್ ಮಾಲಕತ್ವದ ಎ ಟು ಝಡ್ ವಾರಿಯರ್‍ಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಸಿರಾಜ್ ಮಾಲಕತ್ವದ ನಝ್ಮ್ ಯುನೈಟೆಡ್ ಆಲಡ್ಕ ತಂಡವು ರನ್ನರ್‍ಸ್ ಅಪ್ ಆಗಿ ಮೂಡಿ ಬಂತು. ಎ ಟು ಝಡ್ ತಂಡದ ಅಶ್ರಫ್ ಉಪ್ಪುಗುಡ್ಡೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಆಸಿಫ್ ಮಾಡೂರು ಉತ್ತಮ ದಾಳಿಗಾರ ಪ್ರಶಸ್ತಿ ಪಡೆದುಕೊಂಡರು. ನಝ್ಮ್ ಯುನೈಟೆಡ್ ತಂಡದ ಅಶಾಕ್ ಸವ್ಯಸಾಚಿ ಪ್ರಶಸ್ತಿಯನ್ನು ಪಡೆದುಕೊಂಡರೆ. ಬೀಯಿಂಗ್ ಭೂಯಾ ತಂಡದ ರಶೀದ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಶಹೀದ್ ಗುಡ್ಡೆಅಂಗಡಿ, ಹಸೈನಾರ್ ಬೆಂಗಳೂರು ಹಾಗೂ ಇರ್ಫಾನ್ ನೀರಪಾದೆ ವೀಕ್ಷಕ ವಿವರಣೆ ನೀಡಿದರು. ಮುಹಮ್ಮದ್ ಅಲಿ ನಂದಾವರ ಹಾಗೂ ಫಾರೂಕ್ ನಂದಾವರ ತೀರ್ಪುಗಾರರಾಗಿ ಸಹಕರಿಸಿದರು.
ಸಲೀಂ ನಂದಾವರ ಮಾಲಕತ್ವದ ಎಂ.ಎಂ. ಕಿಂಗ್ಸ್, ಫಾರೂಕ್ ಮಾಲಕತ್ವದ ಬೀಯಿಂಗ್ ಭೂಯಾ, ಇರ್ಶಾದ್ ಗುಡ್ಡೆಅಂಗಡಿ ಮಾಲಕತ್ವದ ಇರ್ಶಾ ಫ್ರೆಂಡ್ಸ್ ಗುಡ್ಡೆಅಂಗಡಿ ಹಾಗೂ ಝಕರಿಯಾ ಮೆಲ್ಕಾರ್ ಹಾಗೂ ಹನೀಫ್ ಆಲಡ್ಕ ಮಾಲಕತ್ವದ ಲ್ಯಾನ್ಸರ್ ಲೀಫ್ಸ್ ತಂಡಗಳು ಕೂಟದಲ್ಲಿ ಭಾಗವಹಿಸಿತ್ತು.