ಬಿ.ಸಿ.ರೋಡ್ ಆರಾಧನಾ ಫ್ರೆಂಡ್ಸ್ ಸರ್ಕಲ್ ಇದರ 30ನೇ ವಾರ್ಷಿಕೋತ್ಸವ ಪ್ರಯುಕ್ತ ಹಿಂದೂ ಯುವ ಸೇನೆ ಆರಾಧನಾ ಶಾಖೆ ಇದರ ಜಂಟಿ ಆಶ್ರಯದಲ್ಲಿ ಯಕ್ಷಗಾನ ಬಯಲಾಟ ಹಾಗೂ ಆರಾಧನಾ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಿ.ಸಿ.ರೊಡು ಸ್ಪರ್ಶಾ ಕಲಾಮಂದಿರ ದಲ್ಲಿ ಜರಗಿತು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ತೆಂಕುತಿಟ್ಟಿನ ಹಿರಿಯ ಕಲಾವಿದ ಶಿವರಾಮ ಜೋಗಿ ಬಿ.ಸಿ.ರೋಡು ಅವರಿಗೆ ಯಕ್ಷಗಾನ ಪೋಷಕ ದಿ. ಮರಿಯಪ್ಪಯ್ಯ ಹೊಳ್ಳ ಕಳ್ಳಿಮಾರು ಅವರ ಸ್ಮರಣಾರ್ಥ ಆರಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿವೃತ್ತ ಶಿಕ್ಷಕ ಕೃಷ್ಣರಾಜ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವುದರಿಂದ ಅವರ ಕಲಾಸೇವೆಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ. ಕಿರಿಯ ಕಲಾವಿದರಿಗೆ ಮುಂದಕ್ಕೆ ಬರಲು ಪ್ರೇರಣೆಯಾಗುತ್ತದೆ. ವರ್ಷಂಪ್ರತಿ ಪ್ರಶಸ್ತಿ ನೀಡುವ ಮೂಲಕ ಆರಾಧನಾ ಫ್ರೆಂಡ್ಸ್ ಸರ್ಕಲ್ ಉತ್ತಮ ಕಾರ್ಯ ನಡೆಸುತ್ತಿದೆ ಎಂದರು.
ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಎಂಎಚ್‌ಆರ್ ಡಿ ಯವರು ನಡೆಸುವ ಕಲೋತ್ಸವದಲ್ಲಿ 2017-18 ನೆ ಸಾಲಿನ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬೊಂಡಾಲ ದಿ. ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ನಿರ್ದೇಶಕ, ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರ, ಸಮ್ಮಾನ ನಡೆಸಲಾಯಿತು. ನಾಟಕ ನಿರ್ದೇಶಕ, ದೈಹಿಕ ಶಿಕ್ಷಣ ಶಿಕ್ಷಕ ಚಿನ್ನಪ್ಪ ಮತ್ತು ವಿದ್ಯಾರ್ಥಿಗಳಾದ ನವಿತಾ, ಜಯಗೋವಿಂದ ಸನ್ಮಾನ ಸ್ವೀಕರಿಸಿದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಕಿರಣ್ ರಾಜ್ ಪೂಂಜರಕೋಡಿ, ಪದಾಧಿಕಾರಿಗಳಾದ ಸಂಜೀವ ಕೊಟ್ಟಾರಿ, ಪ್ರಕಾಶ್ ಪೂಂಜರಕೋಡಿ, ಪವನ್ ಕುಮಾರ್, ರಾಜೇಶ್ ಪೂಂಜರಕೋಡಿ, ರಾಮಚಂದ್ರ ಮಯ್ಯ, ನರೆಶ್ ಕುಮಾರ್ ಕಳ್ಳಿಮಾರ್ ಮತ್ತು ಹಿಂದೂ ಯುವಸೇನೆಯ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.