ಮುಂದಿನ ಅವಧಿಯಲ್ಲಿ ಸಜೀಪ ಸಮಗ್ರ ಅಭಿವೃದ್ಧಿ ನಡೆಸಲಾಗುವುದು, ಸುಸಜ್ಜಿತ ಮಾದರಿ ರಾಜಮಾರ್ಗ ನಿರ್ಮಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಸಜೀಪನಡು ವಲಯ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಯು. ಟಿ ಖಾದರ್ ಯುವಾಂದೋಲನ ಪ್ರಯುಕ್ತ ಭಾನುವಾರ ನಡೆದ ಯುವ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜನರ ಆಶೀರ್ವಾದ ಇದ್ದಲ್ಲಿ ಮುಂದಿನ ಬಾರಿಯೂ ಶಾಸಕನಾಗಿ ಆಯ್ಕೆಗೊಳ್ಳಲಿದ್ದೇನೆ. ಯುವ ಜನರೀಗ ದಾರಿ ತಪ್ಪುತ್ತಿದ್ದು, ಹಿರಿಯರ ಮಾರ್ಗದರ್ಶನದ ಕೊರತೆಯಿದೆ. ಗ್ರಾಮ ಮಟ್ಟದಲ್ಲಿ ನಡೆಸಲಾದ ಯುವ ಸಮ್ಮಿಲನ ಯುವಕರಿಗೆ ನೈತಿಕ ನಾಯಕತ್ವ ತುಂಬಬೇಕೆಂದು ಸಲಹೆ ನೀಡಿದ ಸಚಿವರು ಸಂಘಟಕರನ್ನು ಶ್ಲಾಘಿಸಿದರು.
ತಾಲೂಕು ಪಂಚಾಯತ್ ಸದಸ್ಯಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ ಯುವ ನಾಯಕತ್ವ ಮಾರ್ಗದರ್ಶನ ಶಿಬಿರ ನಡೆಸಿಕೊಟ್ಟರು. ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಹಾಜಿ ಎಸ್. ಅಬ್ಬಾಸ್ ಸಜೀಪ, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಮುಡಿಪು ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಅರುಣ್ ಡಿ’ಸೋಜ, ಇರಾ ಗ್ರಾಮಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ, ಮುಡಿಪು ಬ್ಲಾಕ್ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ಸತ್ತಾರ್ ಕೈರಂಗಳ, ಸಜೀಪನಡು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ್ ಭಂಡಾರಿ, ಸಜೀಪನಡು ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಗೋಳಿಪಡ್ಪು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಬೋಲಮೆ, ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಕಾರ್ಯದರ್ಶಿ ಆಸಿಫ್ ಸಜೀಪ, ಸಜೀಪನಡು ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಜಸೀಂ ಸಜೀಪ, ವಲಯ ಕಿಸಾನ್ ಘಟಕದ ಅಧ್ಯಕ್ಷ ಹನೀಫ್ ಗೋಳಿಪಡ್ಪು, ವಲಯ ಕಾಂಗ್ರೆಸ್ ಕೋಶಾಧಿಕಾರಿ ಮೂಸಬ್ಬ ಬೈಲು ಗುತ್ತು, ಯುವ ಕಾಂಗ್ರೆಸ್ ಬೂತ್ ಸಮೀತಿಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ನಿಸಾರ್, ಇಕ್ಬಾಲ್ ಎಸ್. ಎಂ, ಫತ್ತಾಹ್ ಕಂಚಿನಡ್ಕಪದವು, ವಲಯ ಉಪಾಧ್ಯಕ್ಷರಾದ ಜನಾರ್ಧನ್ ದೇರಾಜೆ, ಗಿರೀಶ್ ಪೂಜಾರಿ ಪೆರ್ವ, ಕಿಶೋರ್ ದೇರಾಜೆ ಉಪಸ್ಥಿತರಿದ್ದರು. ಸಜೀಪನಡು ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್. ಅಬೂಬಕ್ಕರ್ ಸಜೀಪ ಸ್ವಾಗತಿಸಿ, ವಂದಿಸಿದರು.