ಪುಂಜಾಲಕಟ್ಟೆ

ಉಚಿತ ಸಾಮೂಹಿಕ ಮದ್ವೆಯಲ್ಲಿ 21 ಜೋಡಿ ಹಸೆಮಣೆಗೆ

ಜಾಹೀರಾತು

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ೩೪ನೇ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 10ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ  21 ಜೋಡಿ ವಧುವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ವೇ| ಮೂ| ಕೃಷ್ಣಭಟ್ ಪೌರೋಹಿತ್ಯದಲ್ಲಿ  ಮಾಂಗಲ್ಯಂ ತಂತು ನಾನೇನಾಎಂಬ ಮಂತ್ರಘೋಷದೊಂದಿಗೆ ಮಾಂಗಲ್ಯಧಾರಣೆ ನಡೆಸಿದ ವಧುವರರು ನೆರೆದ ಗಣ್ಯರ, ಬಂಧುಮಿತ್ರರ ಸಮ್ಮುಖದಲ್ಲಿ ಹಸೆಮಣೆಗೇರಿದರು.

ಬಳಿಕ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ..ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್.ರವಿ ಅವರು ಉದ್ಘಾಟಿಸಿ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ, ಹೀಗಾಗಿ ಸರಕಾರವೂ ಸರಳ ಮದುವೆ, ಆದರ್ಶ ವಿವಾಹ ಹಾಗೂ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರು. ಆದರ್ಶ ವಿವಾಹಕ್ಕೆ ಒತ್ತು ನೀಡುವ ಮೂಲಕ ತುಂಗಪ್ಪ ಬಂಗೇರರ ನೇತೃತ್ವದ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮಾದರಿಯಾಗಿದೆ ಎಂದು   ಹೇಳಿದರು.

 ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಮಾಜಿ ಶಾಸಕ ರುಕ್ಮಯ ಪೂಜಾರಿ, ರಾಜ್ಯ ಬಿಜೆಪಿ ವಕ್ತಾರೆ ಸುಲೋಚನಾ ಜಿ.ಕೆ.ಭಟ್, ಉದ್ಯಮಿಗಳಾದ  ಸುರೇಶ್ ಶೆಟ್ಟಿ ಮಿಜಾರುಪ್ರವೀಣ್ ಕುಮಾರ್ ಬಂಗೇರ, ನಿತ್ಯನಂದ ಪೂಜಾರಿ ಕೆಂತಲೆ, ಸುಂದರ್ರಾಜ್ ಹೆಗ್ಡೆ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ,ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಓಂ ಪ್ರಸಾದ್ ಬಿ.ಸಿ.ರೋಡ್, ಮುರಳಿ ಶೆಟ್ಟಿ ಮುಂಬಯಿ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ಶೆಟ್ಟಿ, ಲೋಕೇಶ್ ಆಚಾರ್ಯ, ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ಉಪಸ್ಥಿತರಿದ್ದರು.

ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು  ಪ್ರಸ್ತಾವಿಸಿದರು.ಅಧ್ಯಕ್ಷ ಪ್ರಶಾಂತ್ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ ಅತ್ತಾಜೆ, ಕೋಶಾಧಿಕಾರಿ ರಾಜೇಶ್ ಪಿ. ಬಂಗೇರ, ಕ್ರೀಡಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

ಡಾ. ಎಂ.ಜೆ. ಪ್ರವೀಣ್ ಭಟ್(ಧಾರ್ಮಿಕ), ಡಾ. ಸುರೇಂದ್ರನಾಥ ನಾಯಕ್-(ವೈದ್ಯಕೀಯ)ವಿಶ್ವೇಶ್ವರ ಭಟ್ ಸುಣ್ಣಂಬಳ(ಯಕ್ಷಗಾನ ಕ್ಷೇತ್ರ), ವಸಂತ್ ಶೆಟ್ಟಿ-(ಉದ್ಯಮ), ನಿತಿನ್ ಪೂಜಾರಿ(ಕ್ರೀಡೆ) ಅವರಿಗೆ  ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಹಾಗೂ ಹರೀಂದ್ರ ಪೈ(ಉದ್ಯಮ), ಮೌನೇಶ್ ವಿಶ್ವಕರ್ಮ -(ಪತ್ರಿಕೋದ್ಯಮ),ಮಹಮ್ಮದ್ ರಫೀಕ್(ಸಮಾಜ ಸೇವೆ), ನಾರಾಯಣ ನಾಯಕ್ ಕರ್ಪೆ(ಸಮಾಜ ಸೇವೆ), ಎಂ. ಕ್ರಿಶ್ ಕುಮಾರ್(ಕಲೆ), ಕು.ರಮ್ಯಶ್ರೀ ಜೈನ್(ಕ್ರೀಡೆ), ಶಬನಾ ಬಾನು (ಶಿಕ್ಷಣ) ಪ್ರದೀಪ್ ನಾಯಕ್(ಸಮಾಜ ಸೇವೆ) ಅವರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಅವರು ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ರಾವ್  ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts