ನವೀನ್ ಫ್ರೆಂಡ್ಸ್ ಬಿ.ಸಿ.ರೋಡ್ ಆಶ್ರಯದಲ್ಲಿ ನಾರಾಯಣಗುರು ವೃತ್ತ ಸಮೀಪದ ಗಾಣದಪಡ್ಪು ಕ್ರೀಡಾಂಗಣದಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ನಡೆಯಿತು. ಈ ಸಂದರ್ಭ ವಿಕಲಚೇತನ ಮಕ್ಕಳಾದ ಭಾಗ್ಯಶ್ರೀ, ಗಣೇಶ್ ಕುಲಾಲ್, ಅಶ್ವನ್-ಅಝ್ಮಲ್ ಅವರಿಗೆ ಸಹಾಯಧನ ವಿತರಿಸಲಾಯಿತು.
ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ, ಬೂಡಾ ಅಧ್ಯಕ್ಷ ಸದಾಶಿವ ಬಂಗೇರಾ, ಮಾಜಿ ರಣಜಿ ಆಟಗಾರ ಪ್ರಶಾಂತ್ ಭಂಡಾರ್‌ಕಾರ್, ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಬೇಬಿ ಕುಂದರ್, ಗ್ಯಾರೇಜ್ ಮಾಲಕ ಸಂಘದ ಅಧ್ಯಕ್ಷ ವಿಶ್ವನಾಥ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ನೆಟ್ಲ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜನಾರ್ಧನ್ ಚೆಂಡ್ತಿಮಾರ್, ಸುಕುಮಾರ್ ಬಂಟ್ವಾಳ್, ಶಿವಪ್ರಸಾದ್ ಬಂಟ್ವಾಳ, ಪ್ರದೀಪ್ ಅಜ್ಜಿಬೆಟ್ಟು, ಗುರುರಾಜ್ ಬಂಟ್ವಾಳ, ಲೋಕೇಶ್ ಸುವರ್ಣ, ನಾರಾಯಣ ಪೆರ್ನೆ, ನವೀನ್ ಬಿ.ಸಿ.ರೋಡ್, ಉಮೇಶ್, ಮಮ್ಮು ಗೂಡಿನಬಳಿ, ವಹಾಬ್ ಗೂಡಿನಬಳಿ ಉಪಸ್ಥಿತರಿದ್ದರು. ಶಾರದಾ ಅಂಧರ ಗೀತೆ ಗಾಯನ ಶೃಂಗೇರಿ ಇವರಿಂದ ಸಂಗೀತ ರಸಮಂಜರಿ ಜರಗಿತು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…