ಬಂಟ್ವಾಳ

ಸೌಹಾರ್ದತೆಯಿಂದ ಎಲ್ಲರನ್ನೂ ಗೆಲ್ಲಲು ಸಾಧ್ಯ: ರಮಾನಾಥ ರೈ


ಸೌಹಾರ್ದತೆಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯ. ಪ್ರತಿಯೊಬ್ಬರಲ್ಲಿ ಸೌಹಾರ್ದ ಮನೋಭಾವ ಬೆಳೆದಾಗ ನಮ್ಮ ಊರು. ತಾಲೂಕು ಜಿಲ್ಲೆ ರಾಜ್ಯ ದೇಶವೇ ಮಾದರಿ ದೇಶವಾಗಿ ಬೆಳೆಯಲು ಸಾಧ್ಯ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.

ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಮಖಾಂ ಉರೂಸ್ ಪ್ರಯುಕ್ತ ಆಯೋಜಿಸಿದ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು

ಕೋಮುಭಾವನೆ ಇರುವ ಒಬ್ಬನಿಂದ ಊರಿಗೆ ಕಟ್ಟ ಹೆಸರು ತರಲು ಸಾಧ್ಯ. ಎಲ್ಲರೂ ಸೌಹಾರ್ದತೆಯಿಂದ ಇದ್ದಾಗ ಊರಿನಲ್ಲಿ ಕೋಮು ಕೃತ್ಯಗಳಿಗೆ ಅವಕಾಶ ಸಿಗುದ್ದಿಲ್ಲ. ಕಟ್ಟತ್ತಿಲದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಇದ್ದು ಉರೂಸ್ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಮತ್ತು ಕ್ರೈಸ್ತ ಸಮುದಾಯದ ಜನರು ಭಾಗವಹಿಸುದ್ದನ್ನು ನಾನು ಕಂಡಿದ್ದೆನೆ ಎಂದು ಹೇಳಿದರು.

ಅಸ್ಸಯ್ಯಿದ್ ವಿ.ಎಸ್ ಅಬ್ದುಲ್ ಹಮೀದ್ ತಂಙಳ್ ಉದ್ಯಾವರ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಟ್ಟತ್ತಿಲ ಮುದರ್ರಿಸ್ ಇಬ್ರಾಹಿಂ ಫೈಝಿ ಪುಳಿಕ್ಕೂರು ಅಧ್ಯಕ್ಷತೆವಹಿಸಿದರು. ಕಟ್ಟತ್ತಿಲ ಜುಮಾ ಮಸೀದಿ ಮಾಜಿ ಗೌರವಾಧ್ಯಕ್ಷ ಕೆ.ಎಂ ಉಮ್ಮರ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಕಳ ಸುಫ್ಯಾನ್ ಸಖಾಫಿ ಮುಖ್ಯ ಭಾಷಣಗೈದರು.

ಕೊಳ್ನಾಡು ಜಿ.ಪಂ ಸದಸ್ಯ ಎಂ.ಎಸ್ ಮುಹಮ್ಮದ್, ಕೊಳ್ನಾಡು ಗ್ರಾ.ಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಯಿ, ಬಂಟ್ವಾಳ ತಾ.ಪಂ ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು, ಬಾಕ್ರಬೈಲ್ ಸೋಮೇಶ್ವರ ದೇವಸ್ಥಾನದ ಅರ್ಚಕ ತಿರುಮಲೇಶ್ವರ ಭಟ್ ಮೆದು, ಸಾಲೆತ್ತೂರು ನಿತ್ಯಾದರ್ ಚರ್ಚ್ ಧರ್ಮಗುರು ಫಾ.ಎಂ. ಹೆನ್ರಿ ಡಿಸೋಜ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಹೈದರ್ ಪರ್ತಿಪಾಡಿ, ಕಟ್ಟತ್ತಿಲ ಜುಮಾ ಮಸೀದಿ ಅಧ್ಯಕ್ಷ ಕೆ.ಪಿ ಅಬ್ದುಲ್ ಖಾದರ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಕಾಂಗ್ರೆಸ್ ಕೊಳ್ನಾಡು ವಲಯ ಅಧ್ಯಕ್ಷ ಎ.ಬಿ ಅಬ್ದುಲ್ಲ, ಬಂಟ್ವಾಳ ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾ.ಪಂ ಸದಸ್ಯರಾದ ಮುಹಮ್ಮದ್ ಮಂಚಿ, ಇಬ್ರಾಹಿಂ ಮಣ್ಣಗದ್ದೆ, ಸಾಲೆತ್ತೂರು ಗ್ರಾ.ಪಂ ಸದಸ್ಯ ನಾರಾಯಣ ಪೂಜಾರಿ ವಾಲ್ತಾಜೆ, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ.ಎಂ.ಕೆ ಮೊಹಮ್ಮದ್ ಹಾಜಿ, ಬಂಟ್ವಾಳ ತಾಲೂಕು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾದವ ಮಾವೆ, ಬಂಟ್ವಾಳ ತಾ.ಪಂ ಮಾಜೆ ಸದಸ್ಯ ಸಾಲೆ ಮುಹಮ್ಮದ್, ಪುರುಷೋತ್ತಮ ಶೆಟ್ಡಿ, ಉದ್ಯಮಿ ಬಾಪಕುಂಞ, ಕಟ್ಟತ್ತಿಲ ಜಮಾಅತ್ ಉಪಾಧ್ಯಕ್ಷ ಡ್ರೈವರ್ ಮೂಸಾ, ಪ್ರ.ಕಾರ್ಯದರ್ಶಿ ಪಿ.ಇಬ್ರಾಹಿಂ, ಕಾರ್ಯದರ್ಶಿಗಳಾದ ಮುಹಮ್ಮದ್ ಕುಂಞ, ಕೆ.ಬಿ ಉಸ್ಮಾನ್, ಕೋಶಾಧಿಕಾರಿ ಮುಹಮ್ಮದ್, ಸದಸ್ಯರಾದ ಅಬೂಬಕ್ಕರ್ ಪಾಲ್ತಾಜೆ, ಡಿ.ಎ ಹಮೀದ್ ಹಾಜಿ ದಾರೆಪಡ್ಪು, ಸಲೀಂ ದಾರೆಪಡ್ಪು ಮುಂತಾದವರು ಉಪಸ್ಥಿತರಿದ್ದರು. ಸಾಲೆತ್ತೂರು ಗ್ರಾ.ಪಂ ಸದಸ್ಯ ಎ.ಸಿ ಮೊದ್ದೀನ್ ಕುಂಞ ಸ್ವಾಗತಿಸಿದರು. ಕಟ್ಟತ್ತಿಲ ಜುಮಾ ಮಸೀದಿ ಕಾರ್ಯದರ್ಶಿ ಕೆ.ಎಂ ಮುಹ್ ಯುದ್ದೀನ್ ಮದನಿ ವಂದಿಸಿದರು. ನೌಫಲ್ ಕೆ.ಬಿ.ಎಸ್ ಕೂಡ್ತಮೋಗರು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ