ಪುಂಜಾಲಕಟ್ಟೆ

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 10ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಾ.4ರಂದು

  • ಪುಂಜಾಲಕಟ್ಟೆಯಲ್ಲಿ ಕಾರ್ಯಕ್ರಮ, ಸಾಧಕರಿಗೆ ಗೌರವ

 

ಕಳೆದ 33 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ  ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ 34ನೇ ಸಂಭ್ರಮಾಚರಣೆಯ ಪ್ರಯುಕ್ತ 10ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಗುರುವಾಯನಕೆರೆ ಕೃಷ್ಣಭಟ್ ಅವರ ಪೌರೋಹಿತ್ಯದಲ್ಲಿ , ಮಧ್ಯಾಹ್ನ 12.18 ಶುಭ ಮುಹೂರ್ತದಲ್ಲಿ 21 ಜೋಡಿ ವಧುವರರಿಗೆ ಸಾಮೂಹಿಕ ವಿವಾಹ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ  ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಮಾಡಲಾಗುವುದು.

ಮಾ.4ರಂದು ಇಲ್ಲಿನ ಬಂಗ್ಲೆ ಮೈದಾನದಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು  ತಿಳಿಸಿದ್ದಾರೆ.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು. ಬೆಳಗ್ಗೆ  9.30ಕ್ಕೆ ಬಸವನಗುಡಿ ಬಸವೇಶ್ವರ ದೇವಾಲಯದಿಂದ ಮದುವೆ ಮಂಟಪದವರೆಗೆ ವಧುವರರ ದಿಬ್ಬಣ ಮೆರವಣಿಗೆ ವಿವಿಧ ಸ್ತಬ್ಧ ಚಿತ್ರ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾತಂಡಗಳೊಂದಿಗೆ ಕೇರಳ ಚೆಂಡೆಗಳ ಆಕರ್ಷಣೆಯೊಂದಿಗೆ ವೈಭವಪೂರ್ವಕವಾಗಿ ಸಾಗಿ ಬರಲಿದೆ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ, ಮುಂಬಯಿ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರ್, ಕೆನರಾ ಬಸ್ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತಿತರ ಗಣ್ಯರು ದಿಬ್ಬಣಕ್ಕೆ ಚಾಲನೆ ನೀಡಲಿರುವರು.

ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ: ಡಾ. ಎಂ.ಜೆ ಪ್ರವೀಣ್ ಭಟ್(ಧಾರ್ಮಿಕ), ಡಾ. ಸುರೇಂದ್ರನಾಥ ನಾಯಕ್-(ವೈದ್ಯಕೀಯ)ವಿಶ್ವೇಶ್ವರ ಭಟ್ ಸುಣ್ಣಂಬಳ(ಯಕ್ಷಗಾನ ಕ್ಷೇತ್ರ), ವಸಂತ್ ಶೆಟ್ಟಿ-(ಉದ್ಯಮ), ನಿತಿನ್ ಪೂಜಾರಿ(ಕ್ರೀಡೆ) ಅವರು ಆಯ್ಕೆಯಾಗಿದ್ದಾರೆ.

 

ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಪ್ರಶಸ್ತಿ : ಹರೀಂದ್ರ ಪೈ(ಉದ್ಯಮ), ಮೌನೇಶ್ ವಿಶ್ವಕರ್ಮ -(ಪತ್ರಿಕೋದ್ಯಮ),ಮಹಮ್ಮದ ರಫೀಕ್(ಸಮಾಜ ಸೇವೆ), ನಾರಾಯಣ ನಾಯಕ್ ಕರ್ಪೆ(ಸಮಾಜ ಸೇವೆ), ಎಂ. ಕ್ರಿಶ್ ಕುಮಾರ್(ಕಲೆ), ಕು.ರಮ್ಯಶ್ರೀ ಜೈನ್(ಕ್ರೀಡೆ) ಅವರು ಆಯ್ಕೆಯಾಗಿದ್ದಾರೆ

ಶ್ರೀ ಕ್ಷೇತ್ರ ಕರಿಂಜೆ ಶ್ರೀ ಶಕ್ತಿಗುರು ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಮತ್ತು ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿರುವರು. ಮುಂಬಯಿ ಉದ್ಯಮಿ ಮಹೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಸಂಸದ ನಳಿನ್ ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಮೀರಾ ಬಾಯಿಂದರ್ ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಏಳಿಯಾಲ, ಮಾಜಿ ಶಾಸಕ ರುಕ್ಮಯ ಪೂಜಾರಿ, ಮೋಹನ್ ಪೂಜಾರಿ ಅಹಮ್ಮದಬಾದ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಶುಭಾಶಂಸನೆ ನೀಡಲಿರುವರು.   ಪ್ರವೀಣ್ ಕುಮಾರ್ ಬಂಗೇರ, ನಿತ್ಯನಂದ ಪೂಜಾರಿ ಕೆಂತಲೆ, ಸುರೇಶ್ ವಾಸುದೇವ ಬಾಳಿಗಾ ತಾಳಿ ವಿತರಿಸುವರು. ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

 ಮಧ್ಯಾಹ್ನ ಸಾರ್ವಜನಿಕರಿಗೆ ವಿವಾಹ ಭೋಜನ ಏರ್ಪಡಿಸಲಾಗಿದ್ದು, ಸಂಜೆ 50 ಸಂಘ ಸಂಸ್ಥೆಗಳಿಗೆ ಅತ್ಯುತ್ತಮ ಸಂಘಟನೆಗಾಗಿ ಶಿಶಿರ್ ಕುಮಾರ್ ಸ್ಮೃತಿ ಸ್ವಸ್ತಿಕ್ ಪುರಸ್ಕಾರ ಪ್ರದಾನ, ತಾಂಬೂಲ ಕಲಾವಿದರಿಂದ ತುಳು ನಾಟಕ ಪ್ರದರ್ಶನ, ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇವರಿಂದ ತುಳುನಾಡ ಸಂಸ್ಕೃತಿ ಪ್ರದರ್ಶನವಿದೆ ಎಂದು  ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ,ಗೌರವಾಧ್ಯಕ್ಷ ಅಬ್ದುಲ್ಲಾ ಪಿ.,ಮಾಜಿ ಅಧ್ಯಕ್ಷ ಪಿ.ಎಂ.ಪ್ರಭಾಕರ,ಕಾರ್ಯದರ್ಶಿ ಜಯರಾಜ ಅತ್ತಾಜೆ, ಕ್ರೀಡಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

 

 

 

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ