ಸಿನಿಮಾ

ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ – ನಿಲುಕದ ನಕ್ಷತ್ರ ತೆರೆಗೆ ಬರಲು ಸಿದ್ಧ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ರುದಿರಾ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿಲುಕದ ನಕ್ಷತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ.

ಇದರಲ್ಲೇನು ವಿಶೇಷ?

ಬಂಟ್ವಾಳ ತಾಲೂಕು ಸಹಿತ ದ.ಕ.ಜಿಲ್ಲೆ ಹಾಗೂ ಕರಾವಳಿಯ ಪ್ರತಿಭೆಗಳ ಸಂಗಮದಲ್ಲಿ ಮೂಡಿಬಂದಿದೆ ನಿಲುಕದ ನಕ್ಷತ್ರ ಚಿತ್ರ.

ಬಹು ನಿರೀಕ್ಷಿತ ಈ ಚಿತ್ರದ ಶೂಟಿಂಗ್ ಸಂಪೂರ್ಣಗೊಂಡಿದ್ದು, ಇದೀಗ ಬಿಡುಗಡೆಯ ಹಾದಿಯಲ್ಲಿದೆ. ವಿಭಿನ್ನ ಕಥಾಹಂದರ ಹೊಂದಿರುವ, ನೈಜ ನಿರೂಪಣೆಯೊಂದಿಗೆ ಹೊಸತನವಿರುವ ಈ ಚಿತ್ರವು ಎಲ್ಲಾ ವರ್ಗದ ಪ್ರೇಕ್ಷಕರ ಮನ ಮುಟ್ಟಲಿದೆ ಎಂಬುದು ಚಿತ್ರತಂಡದ ಹೇಳಿಕೆ.

ಹೊಸ ಪ್ರತಿಭೆಗಳೇ ಅಭಿನಯಿಸಿರುವ ಈ ಚಿತ್ರಕ್ಕೆ ಆನಂದ್ ಅನಿ ಬೆಂಗಳೂರು, ವಿನ್ಸೆಂಟ್ ಡಿಸೋಜ ಹಾಗೂ ಸುಶಾನ್ ರೈ ಮಾವಿನಕಟ್ಟೆ ನಿರ್ಮಾಪಕರಾಗಿದ್ದು, ಧನರಾಜ್ ಶೆಟ್ಟಿ ಮತ್ತು ಪ್ರಸನ್ನ ಎಸ್ ಬಲ್ಮಠ ಸಹ ನಿರ್ಮಾಪಕರಾಗಿದ್ದಾರೆ.

ಇಂಪಾದ ಸಂಗೀತದೊಂದಿಗೆ 6 ಹಾಡುಗಳಿದ್ದು, ಸಾಹಿತ್ಯವನ್ನು ಗಣಿ ದೇವ್ ಕಾರ್ಕಳ ಹಾಗೂ ದೀಪಕ್ ಶೆಟ್ಟಿ ಬರೆದಿದ್ದಾರೆ. ಸಂಗೀತದ ಜೊತೆಗೆ ಚಿತ್ರ ಕಥೆ ಹಾಗೂ ನಿರ್ದೇಶನವನ್ನು ಸ್ವತಃ ಗಣಿ ದೇವ್ ಕಾರ್ಕಳ ಅವರೇ ನಿರ್ವಹಿಸಿದ್ದಾರೆ.

ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರದ ಛಾಯಾಗ್ರಹಕರಾಗಿ ಸುರೇಂದ್ರ ಪಣಿಯೂರು ಕಾರ್ಯನಿರ್ವಹಿಸಿದ್ದಾರೆ. ಹೀಗೆ ಎಲ್ಲಾ ಹೊಸ ಪ್ರತಿಭೆಗಳ ನಟನಾ ವಿಭಾಗ ಹಾಗೂ ತಂತ್ರಜ್ಞರನ್ನು ಹೊಂದಿರುವ ಈ ಚಿತ್ರ ತನ್ನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಈ ವಿಭಿನ್ನ ಚಿತ್ರದ ತಾರಾಗಣದಲ್ಲಿ ಪವನ್ ಆರ್ಯ,ಸುಶ್ಮಿತಾ ರೈ, ಅಭಿಲಾಶ್ ಕುಲಾಲ್, ಪ್ರಜನ್ ರೈ, ಅಭಿನೇತ್ರಿ ಜೈನ್, ಸ್ವಾತಿ ಶೆಟ್ಟಿ, ಯತೀಶ್ ಹಾಗೂ ಶರಣ್ ಅಭಿನಯಿಸಿದ್ದು ಸಹಾಯಕ ನಿರ್ದೇಶಕರಾಗಿ ಸುಶಾನ್ ರೈ ಮಾವಿನಕಟ್ಟೆ ಹಾಗೂ ಕಾರ್ಯಕಾರಿ ನಿರ್ದೇಶಕರಾಗಿ ಕವಿತಾ ಕನ್ನಿಕಾ ಪೂಜಾರಿ ಹಾಗೂ ಕಿಶನ್ ರೈ ಮಡಿಕೇರಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ಈ ಚಿತ್ರದ ಬಹುಪಾಲು ಚಿತ್ರೀಕರಣವು ಕರಾವಳಿಯ ಸುಂದರ ಭಾಗಗಳು ಹಾಗೂ ಬೆಂಗಳೂರಿನಲ್ಲಿ ನಡೆದಿದ್ದು ಚಿತ್ರದ ಗುಣಮಟ್ಟದಲ್ಲಿ ರಾಜಿಯಾಗದ ಚಿತ್ರತಂಡ ಉನ್ನತ ಮಟ್ಟದ ತಂತ್ರಜ್ಞಾನ ಬಳಸಿಕೊಂಡಿದೆ. ಹಾಗೂ ಗ್ರೀನ್ ಸ್ಕ್ರೀನ್ ವಿಎಫ್ಎಕ್ಸ್ ಕೂಡ ಬಳಸಿ ಉತ್ತಮ ದರ್ಜೆಯ ಕನ್ನಡ ಚಲನಚಿತ್ರವನ್ನು ಪ್ರೇಕ್ಷಕ ಮಹಾಪ್ರಭುವಿನ ಮುಂದಿಡಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ವಿಭಿನ್ನತೆಯಲ್ಲೇ ಆರಂಭವಾಗುವ ಈ ಚಿತ್ರ ಅನೇಕ ತಿರುವುಗಳಿಂದ ಕೂಡಿದ್ದು ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಇಂದಿನ ಸಮಾಜದ ವಾಸ್ತವತೆಯನ್ನು ತೋರಿಸಲಿದೆ, ಈ ರೀತಿಯ ಕಥೆ ದಕ್ಷಿಣ
ಭಾರತದ ಚಿತ್ರರಂಗದಲ್ಲಿ ಇದುವರೆಗೆ ಬಂದಿಲ್ಲ, ಇದು ಚಿತ್ರರಸಿಕರ ಮನಗೆಲ್ಲಲಿದೆ ಎಂದು ಚಿತ್ರದ ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್ಗಳು ಬಿಡುಗಡೆಗೊಂಡು ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಿಚಿತ್ರ ಅವತರಣಿಕೆಯ ಪೋಸ್ಟರ್’ನಲ್ಲೇ ಕಥೆಯ ನಿಗೂಢತೆ ತೆರೆದುಕೊಂಡಂತೆ ಗೋಚರಿಸುತ್ತಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ. ಸಂಪೂರ್ಣವಾಗಿ ಹೊಸಬರ ಚಿತ್ರ ಎನ್ನುವ ಹಿರಿಮೆಯೂ ಇರುವ ಈ ಚಿತ್ರದಲ್ಲಿ ಎಲ್ಲ ವಿಭಾಗದಲ್ಲೂ ಹೊಸಬರ ಹೊಸತನದ ಪ್ರತಿಭೆಯ ಅನಾವರಣವಾಗಿರುವುದು ಚಿತ್ರದ ಮತ್ತೊಂದು ವಿಶೇಷ..!!

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.