- “ನಮ್ಮ ಬೂತ್ ನಮ್ಮ ಹೊಣೆ” ಕಾರ್ಯಕ್ರಮಕ್ಕೆ ಚಾಲನೆ
ಕಾಂಗ್ರೆಸ್ ಈಸ್ ಮೈ ರಿಲಿಜಿಯನ್ (ನನ್ನ ಧರ್ಮವೇ ಕಾಂಗ್ರೆಸ್). ಹಿಂದೆ ಚುನಾವಣೆಯಲ್ಲಿ ಸೋತ ಮರುದಿನವೇ ಕಾಂಗ್ರೆಸ್ ಕಚೇರಿಗೆ ತೆರಳಿ ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಮತೀಯವಾದಿಯೂ ಅಲ್ಲ, ಜಾತಿವಾದಿಯೂ ಅಲ್ಲ. ಬೆಂಗಳೂರಲ್ಲಿ ಕುಳಿತು ಐಷಾರಾಮಿ ಜೀವನ ನಡೆಸುವ ಶಾಸಕನಲ್ಲ. ಪೂರ್ಣಕಾಲ ಕ್ಷೇತ್ರದಲ್ಲೇ ಇದ್ದು ನಮ್ಮೂರು ನಮ್ಮವರು ನಂಬಿಕೆಯಡಿ ಕೆಲಸ ಮಾಡುತ್ತಿದ್ದೇನೆ. ವಿರೋಧ ಪಕ್ಷಗಳ ಅಪಪ್ರಚಾರ, ಟೀಕೆಗಳಿಗೆ ಉತ್ತರಿಸುವುದಿಲ್ಲ.
ಹೀಗೆಂದು ಕಾರ್ಯಕರ್ತರ ಮುಂದೆ ಹೇಳಿದವರು ಬಂಟ್ವಾಳ ಶಾಸಕ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ.
ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಮಂಗಳವಾರ ಬಿ.ಸಿ.ರೋಡಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ “ನಮ್ಮ ಬೂತ್ ನಮ್ಮ ಹೊಣೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಮಾನಾಥ ರೈ ಭಾಷಣದ ಮುಖ್ಯಾಂಶಗಳು ಇಲ್ಲಿವೆ.
- ರಾಜ್ಯ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಈಗ ಕಾಣಬಹುದು. ನಿರಂತರ ಅಭಿವೃದ್ಧಿ ಕೇವಲ ಬಂಟ್ವಾಳ ಕ್ಷೇತ್ರದಲ್ಲಷ್ಟೇ ಅಲ್ಲ, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಿದೆ
- ಪ್ರತಿ ವಲಯ ಕಾಂಗ್ರೆಸ್ ನಲ್ಲೂ ಮೀಟಿಂಗ್ ಮಾಡಿದ್ದೇವೆ. ಇನ್ನು ಮುಂದಕ್ಕೆ ಪ್ರತಿ ಬೂತ್ ಕಾರ್ಯಕ್ರಮ ಮಾಡುತ್ತೇನೆ. ನನ್ನ ಬೂತ್ ನನ್ನ ಹೊಣೆ ಕಾರ್ಯಕ್ರಮದಂತೆ ಕೆಲಸ ಮಾಡಬೇಕು. ಪ್ರತಿ ಬೂತ್ ನಲ್ಲೂ ಪದಾಧಿಕಾರಿಗಳನ್ನು ನೇಮಿಸಬೇಕು. 246 ಬೂತ್ ಗಳಿಗೂ ನಾನು ಭೇಟಿ ಕೊಡ್ತೇನೆ. ಅಲ್ಲಿ ಸಂವಾದ ಮಾಡುವ ಕಾರ್ಯ ನಡೆಸುತ್ತೇನೆ
- ಲೋಕಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಜಿಪಂ, ತಾಪಂ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಮತ ಬಂದಿದೆ. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನಮಗೆ ಹೆಚ್ಚು ಮತಗಳನ್ನು ಜನರು ಕೊಟ್ಟಿದ್ದಾರೆ.. ತಾಪಂ, ಜಿಪಂನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
- ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಾವು ಮೊದಲಿನ ಕೆಲಸ ಮಾಡುತ್ತಿದ್ದೇವೆ. 94ಸಿ,ಸಿಸಿಯಲ್ಲಿ ಅತ್ಯಂತ ಹೆಚ್ಚು ಅರ್ಜಿ ಬಂಟ್ವಾಳದಲ್ಲಿದ್ದರೆ, ಬಂಟ್ವಾಳ ತಾಲೂಕಿನಲ್ಲಿ ಅತ್ಯಂತ ಹೆಚ್ಚು ಅರ್ಜಿಗಳು ವಿಲೇವಾರಿಯಾಗಿವೆ. 25 ಸಾವಿರದಷ್ಟು ಅರ್ಜಿ ವಿಲೇವಾರಿಯಾಗಿದೆ. ಮಾರ್ಚ್ ನಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದ ಜೊತೆಯಲ್ಲಿ 94ಸಿ ಹಕ್ಕುಪತ್ರ ನೀಡುವ ಬೃಹತ್ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೇವೆ.
- ತಾನು ಮತೀಯವಾದಿಯಲ್ಲ, ಜಾತೀವಾದಿಯೂ ಅಲ್ಲ. ತನ್ನ ಧರ್ಮವನ್ನು ಆಳವಾಗಿ ಪ್ರೀತಿಸುವ ಮೂಲಕ ಇನ್ನೊಂದು ಧರ್ಮವನ್ನು ಗೌರವಿಸುತ್ತೇನೆ. ನಾವು ನಿಜವಾದ ರಾಮಭಕ್ತರು.
- ನಮ್ಮೂರು ನಮ್ಮವರು ಎಂಬ ನಂಬಿಕೆಯಡಿ ಕೆಲಸ ಮಾಡುತ್ತಿದ್ದೇನೆ,ಅಧಿಕಾರ ಇದ್ದಾಗ, ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ
- ಕಾಂಗ್ರೆಸ್ ಪಕ್ಷ ತನಗೆ ಸಾಕಷ್ಟು ಅವಕಾಶವನ್ನು ನೀಡಿದ್ದು ತಾನು ಪಕ್ಷದ ಋಣದಲ್ಲಿದ್ದು, ಏಳುಬಾರಿ ಕೈ ಚಿಹ್ನಯಲ್ಲಿ ಸ್ಪರ್ಧಿಸಿದ್ದು,ಪಕ್ಷದ ವರಿಷ್ಠರು ಬಯಸಿದರೆ 8 ನೇ ಬಾರಿಗೂ ಕೈ ಚಿಹ್ನೆಯಿಂದಲೇ ಸ್ಪರ್ಧಿಸುತ್ತೇನೆ.
ಜಿಪಂ ಸದಸ್ಯರಾದ ಎಂ.ಎಸ್ .ಮುಹಮ್ಮದ್, ಸಾಹುಲ್ ಹಮೀದ್ , ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ , ಬಂಟ್ವಾಳ ಕ್ಷೇತ್ರದ ವೀಕ್ಷಕ ರಾಜಶೇಖರ ಕೋಟ್ಯಾನ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಪಕ್ಷದ ಕಾರ್ಯಕರ್ತರು ನಮ್ಮ ಬೂತ್ ನಮ್ಮ ಹೊಣೆ ಎನ್ನುವ ದೀಕ್ಷೆಯ ಜೊತೆಗೆ ಕಾರ್ಯ ನಿರ್ವಹಿಸೋಣ ಎಂದರು.
ವೇದಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಪಕ್ಷದ ಪ್ರಮುಖರಾದ ರಾಜಶೇಖರ್, ಯು.ಕೆ ಮೋನು, ಇಬ್ರಾಹಿಂ ಕೋಡಿಜಾಲ್, ಜಿಪಂಸದಸ್ಯರಾದ ಪದ್ಮಶೇಖರ್ ಜೈನ್, ಮಂಜುಳಾ ಮಾವೆ, ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಪ್ರಮುಖರಾದ ಜಗದೀಶ್ ಕೊಯಿಲ, ಟಿ.ಎಸ್.ಅಬ್ದುಲ್ಲ, ಉಮ್ಮರ್ ಪಜೀರು, ಉಸ್ಮಾನ್ ಕರೋಪಾಡಿ, ಐಡಾ ಸುರೇಶ್, ಮಾಧವ ಮಾವೆ, ರಫೀಕ್ ಪಾಣೆಮಂಗಳೂರು, ಚಂದ್ರಶೇಖರ್ ಪೂಜಾರಿ, ವಾಸು ಪೂಜಾರಿ, ವಸಂತಿ ಚಂದಪ್ಪ, ಉಮೇಶ್ ಆಚಾರ್ಯ, ಎಫ್ರಿಯನ್ ಸಿಕ್ವೇರಾ, ಮುಹಮ್ಮದ್ ಶರೀಫ್, ಸಂಪತ್ ಕುಮಾರ್ ಶೆಟ್ಟಿ, ಪರಮೇಶ್ವರ ಮೂಲ್ಯ, ಮುಹಮ್ಮದ್ ನಂದರಬೆಟ್ಟು, ಪದ್ಮನಾಭ ರೈ, ಸುದರ್ಶನ್ ಜೈನ್, ಚಂದ್ರಶೇಖರ ಪೂಜಾರಿ, ಧನಲಕ್ಷ್ಮೀ ಬಂಗೇರ, ಲುಕ್ಮಾನ್, ಆಲ್ಬರ್ಟ್, ನವೀನ್ ಚಂದ್ರ ಶೆಟ್ಟಿ, ಪ್ರಶಾಂತ್ ಕುಲಾಲ್, ಜಯಂತಿ ಪೂಜಾರಿ, ಜನಾರ್ದನ ಚೆಂಡ್ತಿಮಾರ್, ರಾಜು ಕೋಟ್ಯಾನ್, ರುಸೈದ್, ವಿಜಯ ಕುಮಾರ್ ಕಡೇಶ್ವಾಲ್ಯ, ಹೊನ್ನಯ್ಯ, ಎಂ.ಬಿ.ಅಶ್ರಫ್, ಬಿ.ಕೆ.ಇದಿನಬ್ಬ ಮತ್ತಿತರರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್‌ನ ಕಾಂಗ್ರೆಸ್‌ನ ಅಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿ, ಪಕ್ಷ ಪ್ರಮುಖರಾದ ಬಾಲಕೃಷ್ಣ ಆಳ್ವ ,ರಾಜೀವ ಕಕ್ಯಪದವು ನಿರೂಪಿಸಿದರು.