ಸಾಮಾಜಿಕ ಸಾಮರಸ್ಯ ಸಮಾಜದಲ್ಲಿ ಅನಿವಾರ್ಯವಾಗಿದೆ. ರಕ್ತದಾನದ ಮೂಲಕ ಸಮಾಜದಲ್ಲಿ ಸಾಮರಸ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು.
ಅವರು ಭಾನುವಾರ ಇಂಡಿಯಾನ್ ರೆಡ್ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಹಾಗೂ ಎಸ್ಎಸ್ಎಫ್ ಎನ್.ಸಿ ರೋಡ್ ಶಾಖೆ ವತಿಯಿಂದ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ವಿವಿಧ ರೀತಿಯ ಸಮಸ್ಯೆಗಳಿದ್ದು, ಅವುಗಳನ್ನು ಮೀರಿ ಮುಂದೆ ಹೋಗಬೇಕು. ದೇಶದಲ್ಲಿ ವಿವಿಧ ರೀತಿಯ ಜಾತಿ ಭಾಷೆಯ ಜನಗಳಿದ್ದು, ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಎಲ್ಲಾ ಧರ್ಮಿಯರನ್ನು ಒಗ್ಗೂಡಿಸಲು ಸಾಧ್ಯ ಎಂದು ತಿಳಿಸಿದರು.
ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ದುವಾ ಆಶೀರ್ವಚನ ನೀಡಿದರು. ಶಿಬಿರದಲ್ಲಿ 80 ಮಂದಿ ರಕ್ತದಾನ ಮಾಡಿದರು.
ಈ ಸಂದರ್ಭ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ರೆಡ್ಕ್ರಾಸ್ ಸೊಸೈಟಿಯ ಎಡ್ವರ್ಡ್ ದಾಸ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಅಬ್ದುಲ್ ನಾಸೀರ್ ಮಾಸ್ಟರ್, ಸಿ.ಎಚ್ ಅಬೂಬಕ್ಕರ್ ಸೆರ್ಕಳ, ಇಬ್ರಾಹಿಂ ಖಲೀಲ್, ಮುತ್ತಲಿಬ್ ಹಾಜಿ, ಇಬ್ರಾಹಿಂ ಖಂಡಿಗ, ಇಬ್ರಾಹಿಂ ಸಖಾಫಿ ಸೆರ್ಕಳ, ಸಿದ್ದೀಕ್ ಸಅದಿ, ಅಬ್ಬಾಸ್ ಮುಸ್ಲಿಯಾರ್ ಎನ್.ಸಿ ರೋಡ್, ಎಸ್.ಎಂ ಅಬೂಬಕ್ಕರ್ ಸುರಿಬೈಲು, ರಫೀಕ್ ಮಾಡದ ಬಳಿ, ಝಕಾರಿಯಾ ನಾರ್ಶ, ಸಿ.ಎಚ್ ರಝಾಕ್ ಸೆರ್ಕಳ, ಅಬ್ದುಲ್ಲ ನಾರಂಕೋಡಿ, ಅಬ್ದುಲ್ ಕರೀಂ ಕದ್ಕರ್, ಮಹಮ್ಮದ್ ಗಝಾಲ್ ಕುಡ್ತಮುಗೇರು ಮೊದಲಾದವರು ಉಪಸ್ಥಿತರಿದ್ದರು.