ಕಲ್ಲಡ್ಕ

ದೇಶಭಕ್ತಿಯ ಕೊರತೆಯಿಂದ ವಿದೇಶಿ ಆಕ್ರಮಣ: ಡಾ. ಪ್ರಭಾಕರ ಭಟ್

 

ದೇಶದ ಜನರಲ್ಲಿ ದೇಶಭಕ್ತಿಯ ಕೊರತೆ ಇರುವ ಕಾರಣ ವಿದೇಶೀ ಆಕ್ರಮಣಗಳು ನಡೆದಿವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಜಾಹೀರಾತು

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ದೀಪಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಸಂಸ್ಕಾರಯುತ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ. ಈ ಶಿಕ್ಷಣವನ್ನು ಜೀವನದಲ್ಲಿ ಪ್ರತಿಯೊಂದು ವಿದ್ಯಾರ್ಥಿಯು ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.

ವಿದ್ಯಾಕೇಂದ್ರ ಇನ್ನಷ್ಟು ರಾಷ್ಟ್ರಭಕ್ತ ವ್ಯಕ್ತಿತ್ವ ಹೊಂದಿರುವ ವಿದ್ಯಾರ್ಥಿಗಳನ್ನು ನಿರ್ಮಾಣಗೊಳಿಸಲಿ ಎಂದು ಡಾ|ನಿಮ್ಮಿ ಶೆಟ್ಟಿ ಬೆಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಕೇಂದ್ರ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ ವಹಿಸಿದ್ದರು.

ಬೆಂಗಳೂರಿನ ಉದ್ಯಮಿ ಹರಿರಾಜ ಶೆಟ್ಟಿ, ಡಾ. ನಿಮ್ಮಿ ಶೆಟ್ಟಿ, ಜಿಪಂ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರೀ, ಶ್ರೀಕಲಾ ಶಾಸ್ತ್ರಿ, ಶಿವಕುಮಾರ ಗೌಡ, ಅಶೋಕ್ ಕುಮಾರ್, ಪ್ರದೀಪ್, ನಿವೃತ್ತ ಸೈನಿಕ ಪವನ್ ಆಂಜಯ್ಯ, ಡಾ. ಕಮಲಾ ಪ್ರಭಾಕರ ಭಟ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಭಾರತಮಾತೆಗೆಅರ್ಚನೆಗೈದು ಹಿರಿಯರಿಂದ ತಿಲಕಧಾರಣೆ ಹಾಗೂ ಆಶಿರ್ವಾದ ಪಡೆದರು

10ನೇ ತರಗತಿ ವಿದ್ಯಾರ್ಥಿ ಪ್ರಮುಖರು 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪಪ್ರದಾನಗೈದು, ಸಂಚಾಲಕರಿಗೆ ೨೦೧೭-೧೮ನೇ ಶೈಕ್ಷಣಿಕ ವರುಷದಕೊಡುಗೆ ನೀಡಿದರು.

ಸಹಶಿಕ್ಷಕ ಜಿನ್ನಪ್ಪ ಸ್ವಾಗತಿಸಿದರು. ಹರ್ಷಿತಾ, ಜಯಂತ ಶೆಟ್ಟಿ, ಸುಶ್ಮಿತಾ ಅನಿಸಿಕೆ ವ್ಯಕ್ತಪಡಿಸಿದರು. ವೈಷ್ಣವಿ ಪ್ರಭು ಆಶಯ ಗೀತೆ ಹಾಡಿದರು. ಸಹಶಿಕ್ಷಕ ಮನೋಜ್ ವಂದಿಸಿದರು. ಶಾಂಭವಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.