ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠ ಮತ್ತು ಮಂಗಳೂರು ಹೋಬಳಿ ಹಾಗೂ ಶ್ರೀರಾಮ ಸಂಸ್ಕೃತ ವೇದ ಪಾಠ ಶಾಲೆ ವಾರ್ಷಿಕೋತ್ಸವ, ಸೂತ್ರ ಸಂಗಮ, ಶ್ರೀಗುರುಭಿಕ್ಷಾ ಸೇವೆಯು ಮಾ.6ರಿಂದ 8ರ ವರೆಗೆ ನಡೆಯಲಿದೆ.
ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಮಾ.6ರಂದು ಸಂಜೆ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠಕ್ಕೆ ಚಿತ್ತೈಸಲಿದ್ದಾರೆ. ಮಾ.7ರಂದು ಬೆಳಗ್ಗೆ 10 ಗಂಟೆಗೆ ಶ್ರೀಕರಾರ್ಚಿತ ದೇವತಾ ಪೂಜೆ, ಶ್ರೀಗುರುಭಿಕ್ಷಾ ಸೇವೆ, ಪಾದುಕಾ ಪೂಜೆ, ಸಂಜೆ ಸೂರ್ಯಾಸ್ತಕ್ಕೆ ಶ್ರೀಕರಾರ್ಚಿತ ದೇವತಾ ಪೂಜೆ ನೆರವೇರಲಿದೆ.
ಮಾ.೮ರಂದು ಬೆಳಗ್ಗೆ ಗಂಟೆ 6ರಿಂದ ನವಗ್ರಹಶಾಂತಿ ಹವನ, ರಾಮತಾರಕ ಹವನ, ಆಂಜನೇಯ ಹವನ, ಕಲ್ಪೋಕ್ತ ಪೂಜೆ, 7.27ರ ಮೀನ ಲಗ್ನ ಸುಮುಹೂರ್ತದಲ್ಲಿ ಸೂತ್ರ ಸಂಗಮ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಶ್ರೀಕರಾರ್ಚಿತ ದೇವತಾ ಪೂಜೆ, ಮಂಗಳೂರು ಹೋಬಳಿಯ ಶ್ರೀಗುರುಭಿಕ್ಷಾ ಸೇವೆ, ಪಾದುಕಾ ಪೂಜೆ, 12 ಗಂಟೆಗೆ ವಾರ್ಷಿಕೋತ್ಸವದ ಸಭೆ, ದೇಣಿಗೆ ಸಮರ್ಪಣೆ, ಶ್ರೀಗಳಿಂದ ಆಶೀರ್ವಚನ, ಸೂರ್ಯಾಸ್ತಕ್ಕೆ ಶ್ರೀಕರಾರ್ಚಿತ ದೇವತಾ ಪೂಜೆ ನೆರವೇರಲಿದೆ. ಮಾ.9ರಂದು ಶ್ರೀಗಳು ನಿರ್ಗಮಿಸುತ್ತಾರೆ. ಈ ಹಿಂದೆ ಮಾ.7ರಿಂದ ಮಾ.10ರ ವರೆಗೆ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಬದಲಾವಣೆಯಾಗಿದ್ದು ಮಾ.6ರಿಂದ ಮಾ 8ರ ತನಕ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.