ಬಂಟ್ವಾಳ

ಫೆ.26ರಂದು ಕಲ್ಲಡ್ಕಕ್ಕೆ ಅಫ್ಸಲ್ ಖಾಸಿಮಿ

ಟಿಪ್ಪು ಸುಲ್ತಾನ್ ಯಂಗ್ ಮೆನ್ಸ್ ಕಲ್ಲಡ್ಕ ವತಿಯಿಂದ ಫೆ.26ರಂದು ಸಂಜೆ 7ಕ್ಕೆ “ಐಕ್ಯತೆ ಕಾಲದ ಬೇಡಿಕೆ” ಎಂಬ ವಿಷಯದಡಿ ಒಂದು ದಿನದ ಧಾರ್ಮಿಕ ಮತ ಪ್ರವಚನ ಕಲ್ಲಡ್ಕ ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಟಿಪ್ಪು ಸುಲ್ತಾನ್ ಯಂಗ್ ಮೆನ್ಸ್ ನ ಅಧ್ಯಕ್ಷ ಅಶ್ರಫ್ ಅರಭಿ ಹೇಳಿದ್ದಾರೆ.

ಜಾಹೀರಾತು

ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಹಾದಿ ಅಸೈಯದ್ ಇಬ್ರಾಹಿಂ ತಂಙಳ್ ಆತೂರು ದುವಾಃ ನೆರವೇರಿಸುವರು. ಧಾರ್ಮಿಕ ಅಸೋಸಿಯೇಷನ್ನ ಗೌರವಾಧ್ಯಕ್ಷ ಎಸ್.ಬಿ.ದಾರಿಮಿ ಉದ್ಘಾಟಿಸುವರು. ಅಕ್ಕರಂಗಡಿ ಜುಮಾ ಮಸೀದಿಯ ಮದರ್ರಿಸ್ ಕೆ.ಎಸ್. ಹೈದರ್ ದಾರಿಮಿ ಅಧ್ಯಕ್ಷತೆ ವಹಿಸುವರು. “ಇಸ್ಲಾಮಿನಲ್ಲಿ ಐಕ್ಯತೆ ಮತ್ತು ಯುವಕ, ಯುವತಿಯರ ಪಾತ್ರ” ಎಂಬ ವಿಷಯದ ಕುರಿತು ಹಾಫಿಳ್ ಆಫ್ಸಲ್ ಖಾಸಿಮಿ ಕೊಲ್ಲಂ ಅವರು ಮುಖ್ಯ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.

ಎಐಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸ್ವಾದಿಕ್ ಫೈಝಿ, ಪಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್, ಪಿ.ಬಿ.ಇಬ್ರಾಹಿಂ ಭಟ್ಕಳ, ಮುಸ್ತಫಾ ಕೆಂಪಿ, ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುಹೈಲ್ ಕಂದಕ್,  ಝಕರಿಯಾ ಗೋಳ್ತಮಜಲು, ಲುಕ್ಮಾನ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಟಿಪ್ಪು ಸುಲ್ತಾನ್ ಯಂಗ್ ಮೆನ್ಸ್ನ ಪದಾಧಿಕಾರಿಗಳಾದ ಝಮೀರ್, ನೌಫಲ್, ನಝ್ಮೀರ್ ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಾ.30ರಂದು ಪದ್ಯಾಣಕ್ಕೆ ಏಕಾದಶ ತೀರ್ಥಗಳ ಭವ್ಯ ಮೆರವಣಿಗೆ:

| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…

23 hours ago

ಯಕ್ಷಗಾನದ ದಶಾವತಾರಿ ಸೂರಿಕುಮೇರು ಗೋವಿಂದ ಭಟ್ ಇನ್ನಿಲ್ಲ

ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…

3 days ago