ಕ್ಯಾಥೋಲಿಕ್ ಸಭಾ ಮಂಗಳೂರು ಇದರ ಬಂಟ್ವಾಳ ವಲಯ ಸಮಿತಿ ವತಿಯಿಂದ “ಸಮುದಾಯ ಚಿಂತನ-ಮಂಥನ ಸಮಾವೇಶ” ಮೊಡಂಕಾಪು ಅನುಗ್ರಹ ಸಭಾ ಭವನದಲ್ಲಿ ನಡೆಯಿತು.
ಕ್ಯಾಥೋಲಿಕ್ ಸಭಾ ಬಂಟ್ವಾಳ ವಲಯದ ಆಧ್ಯಾತ್ಮಿಕ ನಿರ್ದೇಶಕ ಮ್ಯಾಕ್ಸಿಂ ಎಲ್.ನೊರೊನ್ಹಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ಯಾಥೋಲಿಕ್ ಸಭಾದ ಸುಮಾರು ೧೧ ವಿಚಾರಣಾ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ನಮ್ಮ ಸಮುದಾಯವನ್ನು ಬೆಳೆಯುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಕ್ಯಾಥೋಲಿಕ್ ಸಭಾ ಕಾರ್ಯ ಶ್ಲಾಘನೀಯ ಎಂದರು.
ಕ್ಯಾಥೋಲಿಕ್ ಸಭಾ ಬಂಟ್ವಾಳ ವಲಯದ ಅಧ್ಯಕ್ಷ ಸ್ಟೇನಿ ಲೋಬೊ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕ್ಯಾಥೋಲಿಕ್ ಸಭಾ ಕೇಂದ್ರಿಯ ಸಮಿತಿ ಆಧ್ಯಾತ್ಮಿಕ ನಿರ್ದೇಶಕ ಮ್ಯಾಥ್ಯು ವಾಸ್, ಅಧ್ಯಕ್ಷ ಅನಿಲ್ ಲೋಬೊ, ವಿವಿಧ ಚರ್ಚ್‌ನ ಧರ್ಮಗುರುಗಳಾದ ಗ್ರೆಗರಿ ಡಿಸೋಜ, ಗ್ರೆಗರಿ ಪಿರೇರಾ, ಪೀಟರ್ ಅರಾನ್ಹಾ, ಪಾವ್ಲ್ ಕುಟಿನ್ಹಾ, ಎಲಿಯಸ್ ಡಿಸೋಜ, ಆಲ್ಬನ್ ಡಿಸೋಜ, ಜೇಮ್ಸ್ ಡಿಸೋಜ, ಕಿರಣ್ ಮ್ಯಾಕ್ಸಿಂ ಪಿಂಟೊ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಹಾಗೂ ಕಾಲೇಜಿನ ಪ್ರಾಂಶುಪಾಲೆ ಸುಪ್ರಿಯಾ ಎ.ಸಿ., ವಾಲ್ಟರ್ ನೊರೊನ್ಹಾ, ಸಂದೀಪ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.
ಕ್ಯಾಥೋಲಿಕ್ ಸಭಾ ವಿವಿಧ ಘಟಕ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮ ಮೊದಲು “ಅಲ್ಪಸಂಖ್ಯಾತ ಸವಲತ್ತುಗಳ ಬಗ್ಗೆ ಮಾಹಿತಿ-ಉಪನ್ಯಾಸ” ಕಾರ್ಯಕ್ರಮ ನಡೆಯಿತು. ಸಮಾವೇಶ ಸಮಿತಿ ಸಂಚಾಲಕ ಲೋರೆನ್ಸ್ ಡಿಸೋಜ ಸ್ವಾಗತಿಸಿ, ಶಿಕ್ಷಕಿ ವೀಣಾ ನಿರೂಪಿಸಿದರು.