ಬಂಟ್ವಾಳ

ಬಂಟ್ವಾಳ ಕ್ಷೇತ್ರ ಅಭಿವೃದ್ಧಿ ಡಿಜಿಟಲ್ ಪಯಣಕ್ಕೆ ಚಾಲನೆ

www.bantwalnews.com

ಕಾಂಗ್ರೆಸ್ ಪಕ್ಷದ ಸಾಧನೆ, ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಗಳ ಜೊತೆಗೆ ಬಂಟ್ವಾಳ ಕ್ಷೇತ್ರದಲ್ಲಿ ಸಚಿವ ಬಿ.ರಮಾನಾಥ ರೈ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರಗೊಳಿಸುವ ವಾಹನಕ್ಕೆ  ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಶನಿವಾರ ಸಂಜೆ ಬಂಟ್ವಾಳ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಎದುರು ಚಾಲನೆ ನೀಡಿದರು.

ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶ ಇದರಲ್ಲಿದೆ ಎಂದು ಈ ಸಂದರ್ಭ ಸುದ್ದಿಗಾರರಿಗೆ ತಿಳಿಸಿದ ಸಚಿವ ಬಿ. ರಮಾನಾಥ ರೈ, ಅಭಿವೃದ್ಧಿಯ ವಿವರಗಳನ್ನು ಮತದಾರರ ಮುಂದಿಡಲಾಗುತ್ತಿದೆ. ಈ ಮೂಲಕ ಜನಾಶೀರ್ವಾದವನ್ನು ಕೋರುತ್ತಿದ್ದೇನೆ ಎಂದರು.

ಆರ್.ಟಿ.ಒ.ಕಚೇರಿ ಶೀಘ್ರ ಉದ್ಘಾಟನೆ:

ಬಂಟ್ವಾಳದಲ್ಲಿ ಆರ್.ಟಿ.ಒ. ಕಚೇರಿ ಶೀಘ್ರ ಉದ್ಘಾಟನೆಗೊಳ್ಳಲಿದ್ದು, ಸಾರಿಗೆ ಸಚಿವರೇ ಆಗಮಿಸಲಿದ್ದಾರೆ ಎಂದು ಹೇಳಿದ ರೈ, ಬಸ್ ನಿಲ್ದಾಣವನ್ನು 20 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.

ಈ ಸಂದರ್ಭ ಮಾತನಾಡಿದ ಹರೀಶ್ ಕುಮಾರ್, ರೈ ಅವರು ನಡೆಸಿದ ಜನಪರ ಕಾರ್ಯಗಳನ್ನು ಪ್ರದರ್ಶಿಸಲಾಗುವುದು. ಕಳಂಕರಹಿತ ಪ್ರಾಮಾಣಿಕ ರಾಜಕಾರಣಿ ರಮಾನಾಥ ರೈ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಈ ಸಂದರ್ಭ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಪಕ್ಷ ಪ್ರಮುಖರಾದ ಕೋಡಿಜಾಲ್ ಇಬ್ರಾಹಿಂ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾಧವ ಮಾವೆ, ಪದ್ಮಶೇಖರ ಜೈನ್, ಮಮತಾ ಡಿ.ಎಸ್.ಗಟ್ಟಿ, ಎಂ.ಎಸ್.ಮಹಮ್ಮದ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜಿಲ್ಲಾ ಪ್ರಮುಖರಾದ ಉಸ್ಮಾನ್ ಕರೋಪಾಡಿ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಉದಯ್ ಹೆಗ್ಡೆ, ಜಿನರಾಜ ಆರಿಗ, ಕೆ.ಪದ್ಮನಾಭ ರೈ, ವೆಂಕಪ್ಪ ಪೂಜಾರಿ, ಧನಲಕ್ಷ್ಮೀ ಬಂಗೇರ, ಸಹಿತ ಪಕ್ಷ ಪ್ರಮುಖರು, ತಾಪಂ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು. ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯ್ಲ ಕಾರ್ಯಕ್ರಮ ನಿರೂಪಿಸಿದರು.

ವಾಹನದಲ್ಲಿ ಏನೇನಿದೆ:
ರಮಾನಾಥ ರೈ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿದ ೧೦೦೦ ಕೋಟಿ ರೂ.ಗಳ ಅಭಿವೃದ್ಧಿಯ ಸಾಕ್ಷ್ಯಚಿತ್ರವು ದೊಡ್ಡ ಪರದೆಯಲ್ಲಿ ಈ ವಾಹನದಲ್ಲಿ ಪ್ರದರ್ಶನಗೊಳ್ಳುತ್ತದೆ. ಇದು ಬಂಟ್ವಾಳ ಕ್ಷೇತ್ರದ ಮೂಲೆಮೂಲೆಗಳಿಗೂ ತೆರಳುತ್ತದೆ. ಈ ವಾಹನದ ಮೂಲಕ ರೈ ಅವರು ಶಿಕ್ಷಣ, ವಸತಿ, ಸಂಪರ್ಕ, ರಸ್ತೆ, ಕುಡಿಯುವ ನೀರು, ಆರೋಗ್ಯ, ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಸಿರುವ ನಾನಾ ಅಭಿವೃದ್ಧಿ ಕಾರ್ಯಗಳ ಸಾಕ್ಷ್ಯ ಚಿತ್ರ ಜನರ ಮುಂದೆ ಪ್ರದರ್ಶನಗೊಳ್ಳಲಿದೆ. ದೃಶ್ಯ ಹಾಗೂ ಶ್ರವ್ಯ ಮಾಧ್ಯಮಗಳನ್ನು ಒಳಗೊಂಡಿರುವ ಈ ಡಿಜಿಟಲ್ ವಾಹನ ಪ್ರತಿ ಗ್ರಾಮದ ಅಭಿವೃದ್ಧಿಯ ವಿವರ ನೀಡಲಿದೆ. ಅದರೊಂದಿಗೆ ಸಿದ್ದರಾಮಯ್ಯ ಸರಕಾರದ ಜನಪರ ಯೋಜನೆಯ ಸಾಕ್ಷ್ಯ ಚಿತ್ರವೂ ಪ್ರದರ್ಶನಗೊಳ್ಳಲಿದೆ. ಈ ಡಿಜಿಟಲ್ ವಾಹನ ಪ್ರತಿ ಗ್ರಾಮದ ಆಯ್ದ ಸ್ಥಳಗಳಲ್ಲಿ ಪ್ರದರ್ಶನ ನೀಡಲಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts