ಯೋಗಾಭ್ಯಾಸದ ಮೂಲಕ ಭಾವನಾತ್ಮಕ, ಮಾನಸಿಕ ಹಾಗೂ ಭೌತಿಕ ನೆಲೆಗಳ ನಡುವಿನ ಪರಸ್ಪರ ಸಂಬಂಧದ ಅರಿವು ಉಂಟಾಗುತ್ತದೆ ಎಂದು ಬೆಂಗಳೂರಿನ ಯೋಗ ಶಿಕ್ಷಕಿ ಲಾವಣ್ಯ ಅವರು ಹೇಳಿದರು.
ಬಿ.ಸಿ.ರೋಡಿನಲ್ಲಿ ಸರಿದಂತರ ಪ್ರಕಾಶನದ ಆಶ್ರಯದಲ್ಲಿ ಮುಂಗೇರಿ ರಥ ಯಾತ್ರೆಯ ಪ್ರಯುಕ್ತ ಬಿಹಾರ ಯೋಗ ವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಅವಧಿಯ ಯೋಗ ಶಿಬಿರದ ಸಂದರ್ಭ ಮಾತನಾಡುತ್ತಿದ್ದರು.
ಪ್ರಕಾಶನದ ರಾಜಮಣಿ ರಾಮಕುಂಜ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಯೋಗ ಅನ್ನುವುದು ಕೇವಲ ಭೌತಿಕ ಅಭ್ಯಾಸವಷ್ಟೇ ಅಲ್ಲದೆ ಜೀವನ ಶೈಲಿಯಾಗಿ ರೂಢಿಸಿಕೊಳ್ಳಬೇಕಾಗಿದೆ ಎಂದರು.
ವಿದ್ಯಾಲಯದ ಗೋವಿಂದ ಭಟ್ ಶಿಬಿರವನ್ನು ನಡೆಸಿಕೊಟ್ಟರು. ಸದಸ್ಯೆ ಆಶಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.