ಬಿ.ಸಿ.ರೋಡಿನಲ್ಲಿರುವ ಮಿನಿ ವಿಧಾನಸೌಧದ ಎದುರು ಸೋಮವಾರ ಮಧ್ಯಾಹ್ನದ ವೇಳೆ ರಸ್ತೆಯಲ್ಲೆಲ್ಲ ನೀರು ಹರಿಯತೊಡಗಿದ್ದು, ಉರಿಬಿಸಿಲು ಧೂಳಿನ ನಡುವೆ ಕೆಸರೂ ಸೇರಿಕೊಂಡಿತು. ಇದರಿಂದ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೊಂದರೆಗೆ ಒಳಗಾದರು. ಮೊದಲೇ ಪಾರ್ಕಿಂಗ್ ಅವ್ಯವಸ್ಥೆಯಿಂದ ಕಂಗೆಟ್ಟಿರುವ ಬಿ.ಸಿ.ರೋಡ್ ಹೃದಯಭಾಗದಲ್ಲಿ ಹಿಂದೆ ಇದ್ದ ಸಾರ್ವಜನಿಕ ಶೌಚಾಲಯ ಪಕ್ಕದರಿಂದ ನೀರು ರಸ್ತೆಗೆ ಬಂದಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಈ ವಿದ್ಯಮಾನದಿಂದ ನಡೆದುಕೊಂಡು ಹೋಗುವವರು ಧೂಳಿನೊಂದಿಗೆ ಕೆಸರನ್ನು ಕಾಲಿಗೆ ಮೆತ್ತಿಸಿಕೊಳ್ಳಬೇಕಾಯಿತು.