ಊರಿನ ಹಾಗೂ ಸಂಸ್ಥೆಯ ಬೇಡಿಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಈಡೇರಿಸಿದ ಸಂತೃಪ್ತಿ ಇದೆ ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ ಶೆಟ್ಟಿ ಹೆಳಿದರು.
ಅಳಿಕೆ ಸತ್ಯಸಾಯಿ ವಿಹಾರದಲ್ಲಿ ಶ್ರೀ ಸತ್ಯಸಾಯಿ ಲೋಕ ಸೇವಾ ಪದವಿ ಪೂರ್ವ ಕಾಲೇಜು ಸಂಪರ್ಕಿಸುವ ರಸ್ತೆಗೆ ೨೫ ಲಕ್ಷ ಅನುದಾನದಲ್ಲಿ ಕಾಂಗ್ರೀಟಿಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಅಳಿಕೆ ಸಂಸ್ಥೆಯ ಬಹುಕಾಲದ ಬೇಡಿಕೆಯಾದ ಅಳಿಕೆ – ನೆಕ್ಕಿತ್ತಪುಣಿ ಲಿಂಕ್ ರಸ್ತೆ ಅಭಿವೃದ್ಧಿಗೆ ೩.೭೫ ಕೋಟಿ, ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನ ಸಭಾ ಕ್ಷೇತ್ರದ ೧೨ ಗ್ರಾಮಗಳಿಗೆ ೫೦ ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರು ಗೊಳಿಸಲಾಗಿದೆ ಎಂದು ತಿಳಿಸಿದರು.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಉಪಾಧ್ಯಕ್ಷೆ ಸೆಲ್ವಿನಾ ಡಿ ಸೋಜ, ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್, ವಿದ್ಯಾಸಂಸ್ಥೆಗಳ ಸಂಚಾಲಕ ಕೆ ಎಸ್ ಕೃಷ್ಣ ಭಟ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪ್ರಕಾಶ್ ವಿ. ದೈವಜ್ಞ, ಚಂದ್ರಶೇಖರ್ ಅಳಿಕೆ, ನಿವೃತ್ತ ಶಿಕ್ಷಕ ರತ್ನಾಕರ ರೈ ಕೆ., ಪಂಚಾಯಿತಿ ಸದಸ್ಯರಾದ ಸದಾಶಿವ ಶೆಟ್ಟಿ ಮಡಿಯಾಲ, ಸುಧಾಕರ ಮಡಿಯಾಲ, ಮೋನಪ್ಪ, ರವೀಶ, ಕವಿತಾ ರಮೇಶ್, ಸರಸ್ವತಿ ಕೆ., ಗಿರಿಜಾ ಬರೆಂಗೋಡಿ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಸಮೀರ್ ಪಳಿಕೆ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಅಜಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…