ಲೊರೆಟ್ಟೊ ಕಥೋಲಿಕ್ ಸಭಾ ಘಟಕದ ಬೆಳ್ಳಿಹಬ್ಬ ಅಂಗವಾಗಿ ಲೊರೆಟ್ಟೋ ಶಾಲಾ ವಠಾರದಲ್ಲಿ ನಡೆದ ಉಚಿತ ನೇತ್ರ ಚಿಕಿತ್ಸೆ ಮತ್ತು ಉಚಿತ ಆರೋಗ್ಯ ಶಿಬಿರದಲ್ಲಿ ಸುಮಾರು 450 ಮಂದಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.
ಕಥೋಲಿಕ್ ಸಭಾ ಲೋರೆಟ್ಟೋ ಘಟಕ, ಲೋರೆಟ್ಟೋ ಫ್ರೆಂಡ್ಸ್ ಕ್ಲಬ್, ಫಾದರ್ ಮುಲ್ಲರ್ಸ್ ಆಸ್ಪತ್ರೆ, ತುಂಬೆ-ಕಂಕನಾಡಿ, ಲೆವಿನ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತ್ರ, ಕಿವಿ, ಮೂಗು, ಇ ಸಿ ಜಿ, ಮೂಳೆ, ಜನರಲ್ ಮೆಡಿಸಿನ್, ರಕ್ತ ಪರೀಕ್ಷೆ, ಸ್ತ್ರಿ ರೋಗ, ಮಕ್ಕಳ ಚಿಕಿತ್ಸೆ,ಚರ್ಮ ಇತ್ಯಾದಿ ತಪಾಸಣೆ ಯನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಯ,ತುಂಬೆ-ಕಂಕನಾಡಿ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನಡೆಸಿಕೊಟ್ಟರು.
ಈ ಸಂದರ್ಭ ಲೆವಿನ್ ಸಮೂಹ ಸಂಸ್ಥೆಗಳ ಮಾಲೀಕ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಅವರು ಕೊಡುಗೆಯಾಗಿ ನೀಡಿದ ಕನ್ನಡಕಗಳನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಥೋಲಿಕ್ ಸಭಾ (ರಿ) ಕೇಂದ್ರೀಯ ಅದ್ಯಕ್ಷ ಅನಿಲ್ ಲೋಬೊ ಫೆರ್ಮಯ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ವಲಯ ಅಧ್ಯಕ್ಷ ರಾದ ಸ್ಟ್ಯಾನಿ ಲೋಬೊ, ಸ್ಥಾಪಕ ಅಧ್ಯಕ್ಷರಾದ ವಾಲ್ಟರ್ ನೋರೋನ್ಹ, ಲೋರೆಟ್ಟೋ ಫ್ಟೆಂಡ್ಸ್ ಕ್ಲಬ್ ಅಧ್ಯಕ್ಷರಾದ ಪ್ರಕಾಶ್ ವಾಸ್, ವೈದ್ಯಾಧಿಕಾರಿ ಕಿರಣ್ ಶೆಟ್ಟಿ, ಲೋರೆಟ್ಟೋ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರೀಚಾರ್ಡ್ ಮಿನೇಜಸ್ ಉಪಸ್ಥಿತರಿದ್ದರು.ಚರ್ಚ್ ಧರ್ಮ ಗರುಗಳಾದ ವಂ.ಎಲಿಯಸ್ ಡಿಸೋಜಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಫಾದರ್ ಮುಲ್ಲರ್ಸ್ ಆಸ್ಪತ್ರೆ ತುಂಬೆ, ಇಲ್ಲಿನ ಆಡಳಿತಾಧಿಕಾರಿಯಾದ ವಂ.ರೋಶನ್ ಉಪಸ್ಥಿತರಿದ್ದರು. ಕಥೋಲಿಕ್ ಸಭಾ ಲೋರೆಟ್ಟೋ ಘಟಕದ ಅಧ್ಯಕ್ಷೆ ಆಶಾ ಫೆರ್ನಾಂಡಿಸ್ ಸ್ವಾಗತಿಸಿದರು, ಕಾರ್ಯದರ್ಶಿ ಐಸಾಕ್ ವಾಸ್ ವಂದಿಸಿದರು. ಸಿಪ್ರಿಯನ್ ಡಿಸೋಜಾ ಕಾರ್ಯಕಮ ನಿರೂಪಿಸಿದರು.