ಬಂಟ್ವಾಳ

ಫೆ.10ರಂದು ಕಲ್ಲಡ್ಕದಲ್ಲಿ ರಾಜ್ಯಮಟ್ಟದ ವಿಚಾರಸಂಕಿರಣ, ಉದ್ಘಾಟನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಫೆ.೧೦ರಂದು ಶನಿವಾರ ಇಡೀ ದಿನ ಭಾರತೀಯ ಶೌರ್ಯ ಪರಂಪರೆ ಕುರಿತ ರಾಜ್ಯಮಟ್ಟದ ವಿವಿಧ ವಿಶ್ವವಿದ್ಯಾನಿಲಯಗಳ ವಿಚಾರಸಂಕಿರಣ ನಡೆಯಲಿದ್ದು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಲಿದ್ದಾರೆ.

ಜಾಹೀರಾತು

ಬೆಳಗ್ಗೆ ೯.೪೫ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವಹಿಸಲಿದ್ದಾರೆ. ದಿನವಿಡೀ ವಿಚಾರಗೋಷ್ಠಿಗಳು ನಡೆಯಲಿವೆ. ಮಧ್ಯಾಹ್ನ ೩.೨೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಷ್ಟ್ರೀಯ ವಿಚಾರಗಳಿಗೆ ಆದ್ಯತೆ ನೀಡಿ ಕಳೆದ ಏಳು ವರ್ಷಗಳಿಂದ ನಾನಾ ಕಾರ್ಯಕ್ರಮಗಳನ್ನು ಸಂಸ್ಥೆ ನಡೆಸುತ್ತಿದ್ದು, ವಿಷಯಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಪ್ರದರ್ಶಿನಿಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ೧ ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ರಾಜ್ಯದ ೧೦ ವಿ.ವಿ.ಗಳಿಂದ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಗಿಲ್, ಚೀನಾ ಮೊದಲಾದ ಯುದ್ಧಗಳಲ್ಲಿ ಭಾಗಿಯಾದ ಯೋಧರೊಂದಿಗೆ ಮುಕ್ತ ಸಂವಾದ, ಅಕ್ಷೆಹಿಣಿ ಸೈನ್ಯ ಎಂದರೆ ಹೇಗಿತ್ತು ಮುಂದಾದ ವೈವಿಧ್ಯಮಯ ವಿಚಾರಗಳನ್ನು ಒದಗಿಸುವ ಪ್ರದರ್ಶನ, ವೈಚಾರಿಕ ದೃಷ್ಟಿಕೋನ, ರಾಷ್ಟ್ರೀಯ ಚಿಂತನೆಗಳ ಸಾಹಿತ್ಯಗಳ ಮಾರಾಟ ಈ ಸಂದರ್ಭ ನಡೆಯಲಿದೆ ಎಂದರು.

ವಿಚಾರಸಂಕಿರಣದಲ್ಲಿ ಏನೇನಿದೆ:

ಜಾಹೀರಾತು

ಬೆಳಗ್ಗೆ ೧೧ರಿಂದ ೧೨ರವರೆಗಿನ ಮೊದಲ ಅವಧಿಯಲ್ಲಿ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಶೌರ್ಯಪರಂಪರೆ ಎಂಬ ವಿಚಾರದ ಕುರಿತು ರಾ.ಸ್ವ.ಸಂಘದ ಕರ್ನಾಟಕ ಉತ್ತರ ವಿಭಾಗದ ಪ್ರಾಂತ ಸಹಬೌದ್ಧಿಕ್ ಪ್ರಮುಖ್ ಡಾ. ರವೀಂದ್ರ ಮಾತನಾಡುವರು. ೧೨.೧೫ರಿಂದ ೧೨.೪೫ವರೆಗೆ ಯೋಧರೊಂದಿಗೆ ಸಂವಾದ ನಡೆಯಲಿದೆ. ಮಧ್ಯಾಹ್ನ ೨ರಿಂದ ೩ವರೆಗೆ ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಆದರ್ಶ ಗೋಖಲೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಶೌರ್ಯ ಪರಂಪರೆ ಕುರಿತು ಮಾತನಾಡುವರು. ಮಧ್ಯಾಹ್ನ ೩ರಿಂದ ೩.೨೦ವರೆಗೆ ಜಿಜ್ಞಾಸಾ – ಮುಕ್ತ ಚಿಂತನ, ಪ್ರಶ್ನೋತ್ತರ, ಅನಿಸಿಕೆ ಇರುವುದು. ಮಧ್ಯಾಹ್ನ ೩.೨೦ರಿಂದ ಸಮಾರೋಪ ಕಾರ್ಯಕ್ರಮ ಇರಲಿದ್ದು, ಶ್ರೀರಾಮ ವಿದ್ಯಾಕೇಂದ್ರದ ಸಮಚಾಲಕ ವಸಂತ ಮಾಧವ ಅಧ್ಯಕ್ಷತೆಯಲ್ಲಿ ರಾ.ಸ್ವ.ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಸಮಾರೋಪ ಭಾಷಣ ಮಾಡುವರು ಎಂದರು.

ಯಾಕಾಗಿ ವಿಚಾರಸಂಕಿರಣ:

ಭಾರತದ ಕ್ಷಾತ್ರ-ಪೌರುಷಗಳಿಂದಾಗಿ ಸಾಂಸ್ಕೃತಿಕವಾಗಿ ನಾವಿನ್ನೂ ಭಾರತೀಯರಾಗಿಯೇ ಉಳಿದಿದ್ದೇವೆ ಎಂಬುದನ್ನು ಮನಗಾಣಿಸಲು ಹಾಗೂ ನಮ್ಮ ವೇದ-ವೇದಾಂತಾದಿ ಸಂಸ್ಕೃತಸಾಹಿತ್ಯದಲ್ಲಿ, ಮಹಾಕಾವ್ಯಗಳಲ್ಲಿ ಕ್ಷಾತ್ರವು ಒಂದು  ಪ್ರಮುಖ ಮೌಲ್ಯವಾಗಿಯೇ ಮೆರೆದಿರುವುದನ್ನು ನೆನಪಿಸಲು ವಿಚಾರಸಂಕಿರಣ ನಡೆಯಲಿದೆ ಎಂದು ಡಾ. ಭಟ್ ಹೇಳಿದರು.

ಜಾಹೀರಾತು

ಇತಿಹಾಸಕಾಲದಿಂದೀಚೆಗೂ ಅದೇ ಮೌಲ್ಯ. ಅದೇ ಸ್ಫೂರ್ತಿ ನಮ್ಮ ಜನಜೀವನವನ್ನು ಮುನ್ನಡೆಸಿದೆ ಕಳೆದ ಒಂದು ಶತಮಾನದಿಂದೀಚೆಗೆ ಅದು ದುರ್ಲಕ್ಷ್ಯಕ್ಕೀಡಾಗಿರುವುದನ್ನೂ ಅನೇಕರು ಗುರುತಿಸಿದ್ದಾರೆ: ಸರ್ವಕಾಲಕ್ಕೂ ನಮಗೆ ಅದೇ ಕ್ಷಾತ್ರಮೌಲ್ಯ- ಸ್ಫೂರ್ತಿಯೇ ಆಶ್ರಯಣೀಯ ಎಂಬುದನ್ನೂ ಈ ವಿಚಾರಸಂಕಿರಣ ತೋರ್ಪಡಿಸಲಿದೆ. ಸ್ವಾತಂತ್ರ್ಯೋತ್ತರ ಭಾರತದ ಶಾಲಾ ಪಾಠ್ಯಪುಸ್ತಕಗಳಲ್ಲಿ ಕಾಣಸಿಗದ, ಇತಿಹಾಸಕಾರರು ಅನೇಕರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ, ಬಚ್ಚಿಟ್ಟ ಹತ್ತುಹಲವು ಸಂಗತಿಗಳನ್ನು, ಈ ವಿಚಾರಸಂಕಿರಣದ ಮೂಲಕ ಭಾರತದ ನೈಜ ಇತಿಹಾಸವನ್ನೂ ಇಲ್ಲಿಯ ಅಪ್ರತಿಮ ಕ್ಷಾತ್ರತೇಜವನ್ನೂ ತೋರ್ಪಡಿಸುತ್ತಲೇ ಆಧುನಿಕ ಇತಿಹಾಸಕಾರರ ದುರುದ್ದೇಶವನ್ನು ಬಯಲಿಗೆಳೆಯಲಾಗುವುದು ಎಂದರು.

ವಿದ್ಯಾಕೇಂದ್ರದ ಆವರಣದಲ್ಲಿ ೬೦೦೦ ಚದರ ಅಡಿಯ ವೀರಸಾವರ್ಕರ್ ಹೆಸರಿನ ಸಭಾಮಂಟಪ, ವಿಕ್ರಮಾದಿತ್ಯ ಹೆಸರಿನ ವೇದಿಕೆ, ಪ್ರದರ್ಶಿನಿಗಾಗಿ ೨೦೦೦ ಅಡಿ, ಊಟೋಪಚಾರಕ್ಕಾಗಿ ೪೦೦೦ ಅಡಿಯ ಪೆಂಡಾಲ್‌ಗಳು ಸಿದ್ಧವಾಗುತ್ತಿವೆ. ಕಳೆದ ೭ ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಈ ಬಾರಿ ಇನ್ನಷ್ಟು ವ್ಯಾಪಕತೆಯನ್ನು ಪಡೆದು ಸುಮಾರು ೧೫೦೦ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಿದ್ಧತೆಯನ್ನು ನಡೆಸುತ್ತಿದ್ದಾರೆ ಎಂದು ಭಟ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಆಡಳಿತ ಮಂಡಳಿ ಸದಸ್ಯರಾದ ಶ್ರೀಕರ ಪ್ರಭು, ಚೆನ್ನಪ್ಪ ಕೋಟ್ಯಾನ್, ಪದವಿ ವಿಭಾಗದ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ