ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ನ.ಮ) ದರ್ಗಾ ಶರೀಫಿನ ೩೮ನೇ ವರ್ಷದ ಉರೂಸ್ ಕಾರ್ಯಕ್ರಮ ಫೆ. ೬ ರಿಂದ ೧೧ರವರೆಗೆ ನಡೆಯಲಿದೆ.
ಫೆ ೬ ರಂದು ಅತ್ರಾಡಿ ಖಾಝಿ ಹಾಜಿ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಉರೂಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಫೆ ೧೦ ರಂದು ಮಗ್ರಿಬ್ ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಫಕ್ರುದ್ದೀನ್ ಹಸನಿ ಅಲ್-ಖಾದಿರಿ ದಾರಿಮಿ ತಂಙಳ್ ತಾನೂರು-ಕೇರಳ ಅವರು ದುವಾಶಿರ್ವಚನಗೈಯುವರು. ಸ್ಥಳೀಯ ಖತೀಬ್ ಉಸ್ಮಾನ್ ರಾಝಿ ಬಾಖವಿ ಅಲ್-ಹೈತಮಿ ಮುಖ್ಯ ಭಾಷಣಗೈಯುವರು. ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್ ಬಂಟ್ವಾಳ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಮೋನು ಕಣಚೂರು ಮೊದಲಾದವರು ಭಾಗವಹಿಸಲಿದ್ದಾರೆ.
ಫೆ ೧೧ ರಂದು ಹಗಲು ಉರೂಸ್ ಕಾರ್ಯಕ್ರಮ ನಡೆಯಲಿದ್ದು, ಸುಬ್‌ಹಿ ನಮಾಝ್ ಬಳಿಕ ಶೈಖ್ ಮೌಲವಿ (ನ.ಮ) ಹೆಸರಿನಲ್ಲಿ ಖತಮುಲ್ ಕುರ್‌ಆನ್, ಲುಹ್‌ರ್ ನಮಾಝ್ ಬಳಿಕ ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನೆರವೇರಲಿದೆ.
ಈ ಪ್ರಯುಕ್ತ ಪ್ರತಿ ದಿನ ಮಗ್ರಿಬ್ ಬಳಿಕ ನಡೆಯಲಿರುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಫೆ ೬ ರಂದು ಹಾಜಿ ಕೆ.ಎಂ. ಅಬೂಬಕ್ಕರ್ ಮದನಿ ಸಾಲೆತ್ತೂರು, ಫೆ ೭ ರಂದು ಅಬ್ದುಲ್ಲ ವಹಬಿ ಆರೂರು, ಮಂಜೇರಿ, ಫೆ ೮ ರಂದು ಇಬ್ರಾಹಿಂ ಖಲೀಲ್ ಹುದವಿ ಕಾಸರಗೋಡು, ಫೆ ೯ ರಂದು ಸಿ.ಎಂ. ಅನ್ಸಾರ್ ಫೈಝಿ ಬುರ್‌ಹಾನಿ ಅಡ್ಯಾರ್-ಕಣ್ಣೂರು ಉಪನ್ಯಾಸಗೈಯುವರು. ಪ್ರತಿದಿನ ನೂರುದ್ದೀನ್ ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಮಸೀದಿ ಪ್ರಕಟಣೆ ತಿಳಿಸಿದೆ.