ನಿವೃತ್ತ ಅಧ್ಯಾಪಕ, ವಿದ್ವಾಂಸರಾದ ಮಧುರಕಾನನ ಗೋಪಾಲಕೃಷ್ಣ ಭಟ್ (76) ಶನಿವಾರ ಬೆಳಗ್ಗೆ ನಿಧನ ಹೊಂದಿದರು. ಕಾಸರಗೋಡು ಜಿಲ್ಲೆಯ ಪ್ರಮುಖ ಸಾಹಿತಿಯಾಗಿದ್ದ ಅವರು ಕೆಲ ತಿಂಗಳುಗಳಿಂದ ಮೂಡುಬಿದ್ರೆಯಲ್ಲಿ ವಾಸಿಸುತ್ತಿದ್ದರು.
ನೀರ್ಚಾಲು ಬಳಿಯ ಮಧುರಕಾನನ ನಿವಾಸಿಯಾದ ಇವರು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಫ್ರೌಢ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಹಿರಿಯ ಸಾಹಿತಿಯಾದ ಇವರು ಮಕ್ಕಳ ಗೀತೆಗಳನ್ನು, ದೇವರ ಸುಪ್ರಭಾತ ಸಹಿತ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಮಕ್ಕಳ ‘ಬೆಣ್ಣೆ’ ಎಂಬ ಪಾಕ್ಷಿಕದ ಗೌರವ ಸಂಪಾದಕರೂ ಆಗಿದ್ದಾರೆ.
ಪತ್ನಿ ಜಯಂತಿ, ಪುತ್ರಿ ಡಾ| ಶ್ರೀವಿದ್ಯಾ ಹಾಗೂ ಅಳಿಯ ಡಾ| ಮಹೇಶ್ ಟಿ.ಎಸ್, ಸಹೋದರ ಸಹೋದರಿಯರಾದ ಬಾಲ ಮಧುರಕಾನನ, ರಾಮಚಂದ್ರ ಭಟ್, ಗಣಪತಿ ಭಟ್, ಲಲಿತ ಕುಮಾರಿ, ಲೀಲಾ ಕುಮಾರಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವ ಸಹೋದರ ಸಾಹಿತಿ ಎಂ.ವಿ.ಭಟ್ ಮಧುರಕಾನನ, ಸಹೋದರಿ ಜಯಲಕ್ಷ್ಮಿ ಎಂಬಿವರು ಈ ಹಿಂದೆ ನಿಧನಹೊಂದಿದ್ದಾರೆ.