ತಾಲೂಕಿನ ಕೊಳ್ನಾಡು ಗ್ರಾಮದ ಶಾರದಾ ಅವರ ಬಡ ಕುಟುಂಬಕ್ಕೆ ಸಾಲೆತ್ತೂರು – ಕೊಳ್ನಾಡಿನ ಶ್ರೀರಾಮ್ ಫ್ರೆಂಡ್ಸ್ ವತಿಯಿಂದ ಶೌಚಾಲಯ, ಸ್ನಾನಗೃಹ ಕಟ್ಟಿಸುವ ಕೆಲಸಕ್ಕೆ ಚಾಲನೆ ನೀಡಲಾಯಿತು.
ಶಾರದಾ ಅವರು ಸಂಘಕ್ಕೆಶೌಚಾಲಯ ಮತ್ತು ಸ್ನಾನಗೃಹ ಕಟ್ಟಿಸಿಕೊಡುವಂತೆ ನೀಡಿದ ಮನವಿಗೆ ಸ್ಪಂದಿಸಿದ ಸಂಘ, ಸುಮಾರು 29 ಸಾವಿರ ರೂ. ಖರ್ಚು ಮಾಡಿ ಈ ನೆರವಿಗೆ ಮುಂದಾಗಿದೆ. ಶಾರದರವರ ಮನೆಗೆ ಮಾರ್ಗವಿಲ್ಲದ ಕಾರಣ ಕೆಂಪುಕಲ್ಲು, ಸಿಮೆಂಟ್, ಇಟ್ಟಿಗೆ, ಮರಳು ಇನ್ನಿತರ ಸಾಮಾಗ್ರಿಗಳನ್ನು ಸಾಗಿಸುವ ಸವಾಲನ್ನು ಹೊತ್ತ ಸಂಘ, ಸುಮಾರು 20 ಮಂದಿಯನ್ನು ಒಟ್ಟುಗೂಡಿಸಿ, ನೆರವಾಗಿದೆ.
ಈ ಬಡ ಕುಟುಂಬದಲ್ಲಿ ಶಾರದ ಮತ್ತು ತಾಯಿ ದಾರಮ್ಮರವರು ಇಬ್ಬರೇ ಇದ್ದಾರೆ. ಶಾರದ ಅವರ ತಂದೆ 8ವರ್ಷಗಳ ಹಿಂದೆ ನಿಧನ ಹೊಂದಿದ್ದರು. ದಾರಮ್ಮರವರು ಆನಾರೋಗ್ಯದಿಂದ ಬಳಲುತ್ತಿದ್ದರೆ, ಶಾರದ ಬೀಡಿಕಟ್ಟಿ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಶ್ರೀರಾಮ ಫ್ರೆಂಡ್ಸ್ ಕೊಳ್ನಾಡು ಸಾಲೆತ್ತೂರು ಅಧ್ಯಕ್ಷ ವಿಶ್ವನಾಥ ಗೌಡ ಕೆದುಮೂಲೆ ತಿಳಿಸಿದ್ದಾರೆ.