ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಬಂಟ್ವಾಳ ವಲಯ ಸಮಿತಿಯಿಂದ ಮೂಡಬಿದ್ರೆ ಅಲಂಗಾರು ಚರ್ಚ್ ವಠಾರದಲ್ಲಿ ಜರಗುವ ಕೆಥೋಲಿಕ್ ಸಮಾಜೋತ್ಸವ ಕಾರ್ಯಕ್ರಮದ ಹೊರೆಕಾಣಿಕೆ ಮೆರವಣಿಗೆಯ ಉತ್ಸವಕ್ಕೆ ಮೊಡಂಕಾಪು ಚರ್ಚ್‌ನ ಧರ್ಮಗುರುಗಳಾದ ವಂ. ಅಶ್ವಿನ್ ಕಾರ್ಡೋಜಾ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಪಿಯೂಸ್ ಎಲ್ ರೋಡ್ರಿಗಸ್ , ಕೆಥೋಲಿಕ್ ಸಭಾ ಬಂಟ್ವಾಳ ವಲಯ ಅಧ್ಯಕ್ಷ ಸ್ಟೇನ್ಲಿ ಲೋಬೋ, ಪ್ರಧಾನ ಕಾಂದರ್ಶಿ ಫ್ರಾನ್ಸಿಸ್ ಡೇಸಾ, ಕೆ.ಸ.ಬಂ.ವಲಯದ ಸ್ಥಾಪಕಾಧ್ಯಕ್ಷ ವಾಲ್ಟರ್ ನೋರೋನಾ, ಅಗ್ರಾರ್ ಕೆ.ಸ.ಕೇಂದ್ರೀಯ ನಿಯೋಜಿತ ಅಧ್ಯಕ್ಷ ಅಲ್ವಿನ್ ಮೋನಿಸ್, ಪದಾಧಿಕಾರಿಗಳಾದ ರಿಚಾರ್ಡ್ ಮೆನೇಜಸ್ ಹಾಗೂ 11 ಘಟಕಗಳ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಗಳು ಉಪಸ್ಥಿತರಿದ್ದರು. 11 ಘಟಕಗಳ 7 ವಾಹನಗಳಲ್ಲಿ ಹೊರೆಕಾಣಿಕೆಯನ್ನು ಮೂಡಬಿದ್ರೆಯ ಸ್ವರಾಜ್ ಮೈದಾನಕ್ಕೆ ಸಾಗಿಸಲಾಯಿತು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…