ಕಲ್ಲಡ್ಕ

ಕೋಮು ಸೌಹಾರ್ದ ಸಾರುವ “ಮ್ಯಾರಥಾನ್ ಓಟ”


ಪಾಟ್ರಕೋಡಿ ಇಂಡಿಯನ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಪಾಟ್ರಕೋಡಿ ಹಳೆ ವಿದ್ಯಾರ್ಥಿ ಸಂಘ ಇದರ ಜಂಟಿ ಆಶ್ರಯದಲ್ಲಿ ಗಣರಾಜೋತ್ಸವದ ಅಂಗವಾಗಿ “ಆರೋಗ್ಯಕ್ಕಾಗಿ ಓಟ” ಎಂಬ ಧ್ಯೇಯ ವಾಕ್ಯದೊಂದಿಗೆ ಕೋಮು ಸೌಹಾರ್ದ ಸಾರುವ “ಮ್ಯಾರಥಾನ್ ಓಟ” ಶುಕ್ರವಾರ ಬೆಳಿಗ್ಗೆ ಕೊಡಾಜೆ ಜಂಕ್ಷನ್‌ನಿಂದ ಪಾಟ್ರಕೋಡಿಯವರೆಗೆ ನಡೆಯಿತು.


ಕೆದಿಲ ಗ್ರಾಪಂ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಶೆಟ್ಟಿ ಕಲ್ಲಾಜೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟ್ವಾಳ ತಾಪಂ ಸದಸ್ಯ ಹಾಜಿ ಆದಂ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಕೆದಿಲ ಗ್ರಾಪಂ ಮಾಜಿ ಸದಸ್ಯರಾದ ರಾಬರ್ಟ್ ಲಸ್ರಾದೋ, ಹಮೀದ್ ಮೆಜಸ್ಟಿಕ್, ಸದಸ್ಯರಾದ ಸುದರ್ಶನ್ ಕುದುಂಬ್ಲಾಡಿ, ಉಮೇಶ್ ಮುರುವ, ನೆಟ್ಲಮುಡ್ನೂರು ಗ್ರಾಪಂ ಸದಸ್ಯ ಲತೀಫ್ ನೇರಳಕಟ್ಟೆ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪರಮೇಶ್ವರ ನಾವಡ ಭಟ್, ಕೆದಿಲ ಸೇವಾ ಸಹಕಾರಿ ಸಂಘದ ನಿರ್ದೇಶಕ ಪ್ರವೀನ್ ರೈ ಕಲ್ಲಾಜೆ, ಅಹ್ಮದ್ ಮಾಸ್ಟರ್ ಪಾಟ್ರಕೋಡಿ, ಶಾಲಾ ಮುಖ್ಯೋಪಾಧ್ಯಾಯ ಉಮ್ಮರಗಿ ಶರಣಪ್ಪ, ಹರೀಶ್ ಕುದುಂಬ್ಲಾಡಿ, ಕೆ.ಪಿ.ಮುಹಮ್ಮದ್ ಪಾಟ್ರಕೋಡಿ, ಇಬ್ರಾಹಿಂ ಬಾತಿಶ್, ಪಾಟ್ರಕೋಡಿ ಇಂಡಿಯನ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸಿರಾಜ್ ಕೆತ್ತೆಪುಳಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಝಾಮ್ ಬಿ.ಎಚ್., ಕೆ. ಖಾಸಿಂ ಪಾಟ್ರಕೋಡಿ, ತಾಜುದ್ದೀನ್ ಬಯಬೆ, ಅಝೀಂ ಪಾಟ್ರಕೋಡಿ, ಲತೀಫ್ ಕೋಡಿ, ನೌಶಾದ್ ಕೋಡಿ, ಕಲಂದರ್ ಶಾಫಿ ಪಾಟ್ರಕೋಡಿ ಮತ್ತಿತರರು ಉಪಸ್ಥಿತರಿದ್ದರು. ಎಸ್‌ಡಿಎಂ-ಸಿ ಅಧ್ಯಕ್ಷ ಕೆ.ಎಸ್. ಶರೀಫ್ ಸ್ವಾಗತಿಸಿ, ಉನೈಸ್ ಪಾಟ್ರಕೋಡಿ ವಂದಿಸಿದರು. ನಿಶಾದ್ ಪಾಟ್ರಕೋಡಿ ನಿರೂಪಿಸಿದರು.

ಫಲಿತಾಂಶ:
೧೮-೩೫ರ ವಿಭಾಗ: ಬಿ.ಎಂ.ಕೆ ಅಝೀಝ್ ಬಯಬೆ ಪ್ರಥಮ, ಅಲಿ ಹೈದರ್ ಪಾಟ್ರಕೋಟಿ ದ್ವಿತೀಯ, ನಿಝಾಮ್ ಕೋಡಿ ತೃತೀಯ.
ಹಿರಿಯ ವಿಭಾಗ: ಹಮೀದ್ ಬಸೋಟು ಪ್ರಥಮ, ಉಸ್ಮಾನ್ ಮೆಹಬೂಬ್ ದ್ವಿತೀಯ, ಸಾಜಿದ್ ಮಿತ್ತಪಡ್ಪು ತೃತೀಯ.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

4 hours ago